Advertisement

T20 series; ಕ್ಲೀನ್‌ಸ್ವೀಪ್‌ ಸಾಧನೆ: ಬಾಂಗ್ಲಾ ಎದುರು ಭಾರತಕ್ಕೆ ಬೃಹತ್‌ ಗೆಲುವು

11:48 PM Oct 12, 2024 | Team Udayavani |

ಹೈದರಾಬಾದ್‌: ಸಂಜು ಸ್ಯಾಮ್ಸನ್‌ ಅವರ ಸ್ಫೋಟಕ ಶತಕ ಮತ್ತು ಟಿ20ಯಲ್ಲಿ ಭಾರತದ ಗರಿಷ್ಠ ಮೊತ್ತದ ಸಾಧನೆಯಿಂದ ಭಾರತ ತಂಡವು ಶನಿವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶವನ್ನು 133 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ. ಈ ಗೆಲುವಿನಿಂದ ಭಾರತ ಮೂರು ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್‌ಗೈದಿದೆ. ಟಿ20ಯಲ್ಲಿ ಇದು ಭಾರತಕ್ಕೆ ಒಲಿದ ಸತತ 16ನೇ ಸರಣಿ ಗೆಲುವು ಆಗಿದೆ.

Advertisement

ಸಂಜು ಸ್ಯಾಮ್ಸನ್‌ ಅವರ ಸ್ಫೋಟಕ ಶತಕ ಹಾಗೂ ಸೂರ್ಯಕುಮಾರ್‌ ಯಾದವ್‌ ಮತ್ತು ಹಾರ್ದಿಕ್‌ ಪಾಂಡ್ಯ ಅವರ ಭರ್ಜರಿ ಆಟದಿಂದಾಗಿ ಭಾರತ ಆರು ವಿಕೆಟಿಗೆ 297 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಇದು ಭಾರತದ ಗರಿಷ್ಠ ಮತ್ತು ಸಾರ್ವಕಾಲಿಕವಾಗಿ ಎರಡನೇ ಗರಿಷ್ಠ ಮೊತ್ತವಾಗಿದೆ. 2023ರಲ್ಲಿ ಮಂಗೋಲಿಯ ವಿರುದ್ಧ ನೇಪಾಲ 3 ವಿಕೆಟಿಗೆ 314 ರನ್‌ ಸಿಡಿಸಿರುವುದು ಟಿ20 ಕೂಟದ ಗರಿಷ್ಠ ಮೊತ್ತವಾಗಿದೆ.

ಗೆಲ್ಲಲು 298 ರನ್‌ ಗಳಿಸುವ ಕಠಿನ ಗುರಿ ಪಡೆದ ಬಾಂಗ್ಲಾದೇಶವು ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿ 7 ವಿಕೆಟಿಗೆ 164 ರನ್‌ ಗಳಿಸಷ್ಟೇ ಶಕ್ತವಾಗಿ ಶರಣಾಯಿತು. ಕೇವಲ ಲಿಟನ್‌ ದಾಸ್‌ ಮತ್ತು ತೌಹಿದ್‌ ಹೃದಯ್‌ ಭಾರತದ ದಾಳಿಯನ್ನು ಸ್ವಲ್ಪ ಮಟ್ಟಿಗೆ ಎದುರಿಸಲು ಶಕ್ತರಾದರು. ದಾಸ್‌ 42 ಮತ್ತು ಹೃದಯ್‌ 63 ರನ್‌ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ಬಾಂಗ್ಲಾ ಟಿ20 ಸರಣಿಯಲ್ಲೂ ಕ್ಲೀನ್‌ಸಿÌàಪ್‌ ಸೋಲು ಕಂಡಿತು. ಬಿಗು ದಾಳಿ ಸಂಘಟಿಸಿದ ರವಿ ಬಿಷ್ಣೋಯಿ 30 ರನ್ನಿಗೆ 3 ವಿಕೆಟ್‌ ಕಿತ್ತರು.

ಸ್ಯಾಮ್ಸನ್‌ ಚೊಚ್ಚಲ ಶತಕ
ಸ್ಯಾಮ್ಸನ್‌ ಅವರ ಸ್ಫೋಟಕ ಆಟ ಈ ಪಂದ್ಯದ ಆಕರ್ಷಣೆಯಾಗಿತ್ತು. ಬಾಂಗ್ಲಾ ದಾಳಿಯನ್ನು ದಂಡಿಸಿದ ಅವರು ಟಿ20ಯಲ್ಲಿ ಚೊಚ್ಚಲ ಹಾಗೂ ಎರಡನೇ ಅತೀವೇಗದ ಶತಕ ಸಿಡಿಸಿದರು. ಅತೀ ವೇಗದ ಶತಕವನ್ನು ರೋಹಿತ್‌ ಶಮರ 35 ಎಸೆತಗಳಲ್ಲಿ ಸಿಡಿಸಿದ್ದರು. ಕೇವಲ 40 ಎರಸೆತಗಳಲ್ಲಿ ಶತಕ ಪೂರ್ತಿಗೊಳಿಸಿದ ಸ್ಯಾಮ್ಸನ್‌ ಒಟ್ಟಾರೆ 47 ಎಸೆತಗಳಿಂದ 11 ಬೌಂಡರಿ ಮತ್ತು 8 ಸಿಕ್ಸರ್‌ ನೆರವಿನಿಂದ 111 ರನ್‌ ಸಿಡಿಸಿದ್ದರು.

Advertisement

ಸ್ಯಾಮ್ಸನ್‌ ಅವರಿಗೆ ಉಪಯುಕ್ತ ಬೆಂಬಲ ನೀಡಿದ ಸೂರ್ಯಕುಮಾರ್‌ ಯಾದವ್‌ 35 ಎಸೆತಗಳಿಂದ 75 ರನ್‌ ಹೊಡೆದರು. ಅವರಿಬ್ಬರು ದ್ವಿತೀಯ ವಿಕೆಟಿಗೆ 173 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾಗಿದ್ದರು. ಕೊನೆ ಹಂತದಲ್ಲಿ ರಿಯಾನ್‌ ಪರಾಗ್‌ ಮತ್ತು ಹಾರ್ದಿಕ್‌ ಪಾಂಡ್ಯ ಬಿರುಸಿನ ಆಟ ಆಡಿದ್ದರಿಂದ ಮೊತ್ತ 300ರ ಸನಿಹಕ್ಕೆ ತಲುಪಿತು. ಪಾಂಡ್ಯ 18 ಎಸೆತಗಳಿಂದ 47 ಮತ್ತು ಪರಾಗ್‌ ಕೇವಲ 13 ಎಸೆತಗಳಿಂದ 34 ರನ್‌ ಹೊಡೆದರು. ಅವರಿಬ್ಬರು ನಾಲ್ಕನೇ ವಿಕೆಟಿಗೆ 70 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು.

ಸಂಕ್ಷಿಪ್ತ ಸ್ಕೋರು: ಭಾರತ ಆರು ವಿಕೆಟಿಗೆ 297 (ಸ್ಯಾಮ್ಸನ್‌ 111, ಸೂರ್ಯ ಕುಮಾರ್‌ ಯಾದವ್‌ 75, ರಿಯಾನ್‌ ಪರಾಗ್‌ 34, ಹಾರ್ದಿಕ್‌ ಪಾಂಡ್ಯ 47, ತಂಜಿಮ್‌ ಹಸನ್‌ ಶಕಿಬ್‌ 66ಕ್ಕೆ 3); ಬಾಂಗ್ಲಾದೇಶ 7 ವಿಕೆಟಿಗೆ 164 (ಲಿಟನ್‌ ದಾಸ್‌ 42, ತೌಹಿದ್‌ ಹೃದಯ್‌ 63 ಔಟಾಗದೆ, ಮಯಾಂಕ್‌ ಯಾದವ್‌ 32ಕ್ಕೆ 2, ರವಿ ಬಿಷ್ಣೋಯಿ 30ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next