Advertisement
ಇವರೆಲ್ಲರೂ ಸ್ಪಿನ್ನರ್‌ಗಳೆಂಬುದು ವಿಶೇಷ.ಉತ್ತರಪ್ರದೇಶದ ಎಡಗೈ ಸ್ಪಿನ್ನರ್ ಸೌರಭ್ ಕುಮಾರ್, ರಾಜಸ್ಥಾನದ ಲೆಗ್‌ಸ್ಪಿನ್ನರ್ ರಾಹುಲ್ ಚಹರ್, ತಮಿಳುನಾಡು ತಂಡದ ಎಡಗೈ ಸ್ಪಿನ್ನರ್ ಆರ್. ಸಾಯಿ ಕಿಶೋರ್ ಮತ್ತು ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ವಾಷಿಂಗ್ಟನ್ ಸುಂದರ್ ಅವರೇ ಈ ನೆಟ್ ಬೌಲರ್‌ಗಳು.
ಸರಣಿಯ ಮೊದಲ ಟೆಸ್ಟ್ ಪಂದ್ಯ ಫೆ. 9ರಂದು ನಾಗ್ಪುರದಲ್ಲಿ ಆರಂಭವಾಗಲಿದೆ. ಇದಕ್ಕಾಗಿ ಭಾರತ ತಂಡದ ಆಟಗಾರರು ಗುರುವಾರವೇ ಇಲ್ಲಿನ ಹಳೆಯ ಮತ್ತು ನೂತನ ವಿಸಿಎ ಕ್ರೀಡಾಂಗಣಗಳಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಇನ್ನೊಂದೆಡೆ ಆಸ್ಟ್ರೇಲಿಯದ ಕ್ರಿಕೆಟಿಗರು ಬೆಂಗಳೂರಿನ ಹೊರವಲಯವಾದ ಆಲೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.