Advertisement

ಆಸೀಸ್‌ ಮಣಿಸಿ ಅಂಡರ್‌ 19 ವಿಶ್ವಕಪ್‌ ಎತ್ತಿದ ಭಾರತದ ಯುವ ಪಡೆ

09:07 AM Feb 03, 2018 | |

ಮೌಂಟ್‌ ಮಾಂಗನಿ: ಅಂಡರ್‌ 19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಶುಕ್ರವಾರ ನಡೆದ ರೋಚಕ ಫೈನಲ್‌ ಪಂದ್ಯದಲ್ಲಿ ಭಾರತದ ಯುವ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡು ಸಂಭ್ರಮಿಸಿದೆ. 

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಪ್ರಥ್ವಿ ಶಾ ಪಡೆ ಬೌಲಿಂಗ್‌ ದಾಳಿಗೆ ಸಿಲುಕಿ 216 ರನ್‌ ಗಳಿಗೆ ಸರ್ವ ಪತನ ಕಂಡು ಗೆಲುವಿಗೆ 217 ರನ್‌ಗಳ ಸಾಧಾರಣ ಗುರಿ ಮುಂದಿಟ್ಟಿತ್ತು. ಗುರಿ ಬೆನ್ನಟ್ಟಿದ ಯುವ ಪಡೆ 38.5 ಓವರ್‌ಗಳಲ್ಲಿ  220 ರನ್‌ ಗಳಿಸಿ 8 ವಿಕೆಟ್‌ಗಳಿದ ವಿಜಯದ ಕೇಕೆ ಹಾಕಿತು. 

ಮನ್‌ಜೋತ್‌ ಕಾಲ್ರಾ ಅಮೋಘ ಶತಕ !
ಭಾರತ ತಂಡಕ್ಕೆ ಆಧಾರವಾದ ಆರಂಭಿಕ ಆಟಗಾರ ಮನ್‌ಜೋತ್‌ ಕಾಲ್ರಾ ನೆಲಕಚ್ಚಿ ಆಟವಾಡಿ ಭರ್ಜರಿ ಶತಕ ಸಿಡಿದರು. 102 ಎಸೆತಗಳಿಂದ 101 ರನ್‌ಗಳಿಸಿದ ಅವರು ಅಜೇಯರಾಗಿ ಉಳಿದರು. 

ಕಾಲ್ರಾಗೆ ಸಾಥ್‌ ನೀಡಿದ ನಾಯಕ ಪ್ರಥ್ವಿ ಶಾ 29 ರನ್‌ ಗಳಿಸಿ ಔಟಾದರೆ, ಶುಭಂ ಗಿಲ್‌ 31 ರನ್‌ಗಳಿಸಿ ಔಟಾದರು. ವಿಕೆಟ್‌ ಕೀಪರ್‌ ಹಾರ್ವಿಕ್‌ ದೇಸಾಯಿ 47 ರನ್‌ಗಳಿಸಿ ಅಜೇಯರಾಗಿ ಉಳಿದರು. 

ದ್ರಾವಿಡ್‌ ಶಿಷ್ಯರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.  

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆಸೀಸ್‌ 32 ರನ್‌ ಆಗುವಷ್ಟರಲ್ಲಿ ಮೊದಲ ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತಕ್ಕೊಳಗಾಯಿತು. 47.2 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. 

 3 ನೇ ವಿಕೆಟ್‌ಗೆ ಭರ್ಜರಿ ಜೊತೆಯಾಟವಾಡಿದ ಜೋನಾಥನ್‌ ಮೆರ್‌ಲೋ ಗರಿಷ್ಠ 76 ರನ್‌ಗಳಿಸಿ ನಿರ್ಗಮಿಸಿದರು. ತಂಡಕ್ಕೆ  ಆರಂಭಿಕ ಆಟಗಾರರಾದ ಜಾಕ್‌ ಎಡ್ವರ್ಡ್‌ 28 , ಮ್ಯಾಕ್ಸ್‌ ಬ್ರ್ಯಾಂಟ್‌ 14 ,ನಾಯಕ  ಜೇಸನ್‌ ಸಾಂಗಾ 13, ಪರಮ್‌ ಉಪ್ಪಲ್‌ 34 , ಮ್ಯಾಕ್‌ ಸ್ವೀನಿ 23 , ವಿಲ್‌ ಸಥರ್‌ಲ್ಯಾಂಡ್‌ 5 , ಬ್ಯಾಕ್‌ಸ್ಟರ್‌ ಜೆ ಹೋಲ್ಟ್ 13 ರನ್‌ ಕೊಡುಗೆ ಸಲ್ಲಿಸಿ ಔಟಾದರು. 

ಬಿಗಿ ಬೌಲಿಂಗ್‌ 
ಪ್ರಬಲ ಆಸೀಸ್‌ ತಂಡವನ್ನು ಬೌಲಿಂಗ್‌ನಲ್ಲೂ ಶಾ ಪಡೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಭಾರತದ ಪರ ಇಶಾನ್‌ ಪೊರೆಲ್‌, ಶಿವಸಿಂಗ್‌ , ಕಮಲೇಶ್‌ ನಾಗರಕೋಟಿ ಅನುಕೂಲ್‌ ರಾಯ್‌ ಅವರು ತಲಾ 2 ವಿಕೆಟ್‌ ಪಡೆದರೆ ಶಿವಮ್‌ ಮಾವಿ ಅವರು 1 ವಿಕೆಟ್‌ ಪಡೆದು ಆಸೀಸ್‌ ಕಟ್ಟಿ ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದರು. 

ಭಾರತ ಕಂಡ 6ನೇ ಪ್ರಶಸ್ತಿ ಸಮರದಲ್ಲಿ  4 ನೇ  ಸಲ ಚಾಂಪಿಯನ್‌ ಆಗಿದೆ. ಈ ಹಿಂದೆ 2 ಸಲ ಫೈನಲ್‌ನಲ್ಲಿ ಎಡವಿತ್ತು. ಇದರಲ್ಲಿ 2016ರಲ್ಲಿ ನಡೆದ ಕಳೆದ ಸಲದ ವಿಶ್ವಕಪ್‌ ಫೈನಲ್‌ ಸೋಲು ಕೂಡ ಸೇರಿದೆ.

 5ನೇ ವಿಶ್ವಕಪ್‌ ಫೈನಲ್‌ ಆಡಿದ  ಆಸ್ಟ್ರೇಲಿಯಕ್ಕೆ ನಿರಾಶೆ ಅನುಭವಿಸಿತು.  3 ಸಲ ಟ್ರೋಫಿ ಎತ್ತಿದ ಕಾಂಗರೂ ಕಿರಿಯರು, ಒಮ್ಮೆ ರನ್ನರ್ ಅಪ್‌ಗೆ ತೃಪ್ತಿಪಟ್ಟಿದ್ದರು. ಅದು 2012ರ ಪ್ರಶಸ್ತಿ ಸಮರ. ಟೌನ್ಸ್‌ವಿಲ್ಲೆಯಲ್ಲಿ ಅಂದು ಆಸ್ಟ್ರೇಲಿಯಕ್ಕೆ ಎದುರಾದ ತಂಡ ಭಾರತ ಎಂಬುದು ವಿಶೇಷ. ಭಾರತದ ಗೆಲುವಿನ ಅಂತರ 6 ವಿಕೆಟ್‌. 2012ರ ಬಳಿಕ ಆಸ್ಟ್ರೇಲಿಯ ಕಾಣುತ್ತಿರುವ ಮೊದಲ ಫೈನಲ್‌ ಇದಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next