Advertisement
ಆರಂಭಿಕ ಕುಸಿತದ ಬಳಿಕದ ಬಳಿಕ ಹಾರ್ದಿಕ್ ಮತ್ತು ಧೋನಿ ಅವರ ಸಾಹಸದ ಬ್ಯಾಟಿಂಗ್‌ನಿಂದ ಭಾರತ 7 ವಿಕೆಟಿಗೆ 281 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು. ಆಬಳಿಕ ಸುರಿದ ಮಳೆಯಿಂದಾಗಿ ಆಸ್ಟ್ರೇಲಿಯ ಗೆಲ್ಲಲು 21 ಓವರ್‌ಗಳಲ್ಲಿ 164 ರನ್ ಗಳಿಸುವ ಗುರಿ ನಿಗದಿಪಡಿಸಲಾಯಿತು. ಬೌಲಿಂಗ್‌ನಲ್ಲೂ ಮಿಂಚಿದ ಹಾರ್ದಿಕ್ ಪಾಂಡ್ಯ ಸಹಿತ ಕುಲದೀಪ್ ಮತ್ತು ಚಾಹಲ್ ಅವರ ಉತ್ತಮ ದಾಳಿಯಿಂದಾಗಿ ಆಸ್ಟೇಲಿಯ ನಿಗದಿತ 21 ಓವರ್‌ಗಳಲ್ಲಿ 9 ವಿಕೆಟಿಗೆ 137 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಆರಂಭಿಕ ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಜೇಮ್ಸ್ ಫಾಕ್ನರ್ ಮಾತ್ರ ಎರಡಂಕೆಯ ಮೊತ್ತ ಗಳಿಸಿದರು. 39 ರನ್ ಗಳಿಸಿದ ಮ್ಯಾಕ್ಸ್‌ವೆಲ್ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ ಫಾಕ್ನರ್ 32 ರನ್ ಗಳಿಸಿ ಔಟಾಗದೆ ಉಳಿದರು.
Related Articles
Advertisement
ಪಾಂಡ್ಯ ಬ್ಯಾಟಿಂಗ್ ಪವರ್: 64ಕ್ಕೆ 4, 87ಕ್ಕೆ 5 ವಿಕೆಟ್… ಈ ರೀತಿಯಾಗಿ ಕುಸಿಯುತ್ತಲೇ ಹೋದ ಭಾರತಕ್ಕೆ ನೂರೈವತ್ತರ ಗಡಿಯೂ ಮರೀಚಿಕೆಯಾಗುವ ಸಾಧ್ಯತೆ ಇತ್ತು. ಆದರೆ ಕೆಳ ಕ್ರಮಾಂಕದ ಆಟಗಾರರ ಅಮೋಘ ಬ್ಯಾಟಿಂಗ್ ಸಾಹಸದಿಂದ ಭಾರತ ಸವಾಲಿನ ಮೊತ್ತ ಪೇರಿಸುವಂತಾಯಿತು.
ಬಹೂಪಯೋಗಿ ಆಲ್‌ರೌಂಡರ್ ಆಗಿ ಬೆಳೆಯುತ್ತಿರುವ ಹಾರ್ದಿಕ್ ಪಾಂಡ್ಯ ಆಸೀಸ್ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ 83 ರನ್ ಸಿಡಿಸಿದರು. 66 ಎಸೆತಗಳ ಈ ಸ್ಫೋಟಕ ಆಟದ ವೇಳೆ 5 ಬೌಂಡರಿ, 5 ಸಿಕ್ಸರ್ ಸಿಡಿಯಲ್ಪಟ್ಟವು. ಇದರಲ್ಲಿ 4 ಸಿಕ್ಸರ್ ಝಂಪ ಎಸೆತಗಳಲ್ಲಿ ಗಗನಕ್ಕೆ ಚಿಮ್ಮಿದವು. ಈ ವೇಳೆ “ಹ್ಯಾಟ್ರಿಕ್ ಸಿಕ್ಸರ್’ ಕೂಡ ದಾಖಲಾಯಿತು. ಅವರ ಒಂದು ಓವರಿನಲ್ಲಿ ಪಾಂಡ್ಯ 24 ರನ್ ದೋಚಿದರು. ಕುಸಿತ ಕಂಡು ಹತಾಶರಾಗಿದ್ದ ಭಾರತದ ಅಭಿಮಾನಿಗಳಿಗೆ 7ನೇ ಕ್ರಮಾಂಕದಲ್ಲಿ ಆಡಲಿಳಿದ ಪಾಂಡ್ಯ ಬ್ಯಾಟಿಂಗಿನ ರಸದೌತಣವನ್ನೇ ಉಣಿಸಿದರು. ಇದು ಪಾಂಡ್ಯ ಅವರ 3ನೇ ಅರ್ಧ ಶತಕ ಹಾಗೂ ಜೀವನಶ್ರೇಷ್ಠ ಬ್ಯಾಟಿಂಗ್.
ಮಾಜಿ ನಾಯಕ ಧೋನಿ 66ನೇ ಅರ್ಧ ಶತಕದೊಂದಿಗೆ ತಂಡದ ನೆರವಿಗೆ ನಿಂತರು. ಅವರ ಕೊಡುಗೆ 79 ರನ್. 88 ಎಸೆತ ಎದುರಿಸಿದ ಧೋನಿ 4 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿ ಅಂತಿಮ ಓವರಿನಲ್ಲಿ ಔಟಾದರು. ಧೋನಿ-ಪಾಂಡ್ಯ ಜತೆಯಾಟದಲ್ಲಿ 6ನೇ ವಿಕೆಟಿಗೆ 118 ರನ್ ಸಂಗ್ರಹಗೊಂಡಿತು.
ಕೊನೆಯಲ್ಲಿ ಧೋನಿ-ಭುವನೇಶ್ವರ್ 7ನೇ ವಿಕೆಟಿಗೆ 8.5 ಓವರ್‌ಗಳಿಂದ 72 ರನ್ ಒಟ್ಟುಗೂಡಿಸಿ ಕಾಂಗರೂಗಳಿಗೆ ಕಗ್ಗಂಟಾದರು. ಭುವಿ ಗಳಿಕೆ 30 ಎಸೆತಗಳಿಂದ ಅಜೇಯ 32 ರನ್ (5 ಬೌಂಡರಿ). ಕೇದಾರ್ ಜಾಧವ್ 54 ಎಸೆತಗಳಿಂದ 40 ರನ್ ಹೊಡೆದರು (5 ಬೌಂಡರಿ).
ಸ್ಕೋರ್ಪಟ್ಟಿಭಾರತ
ಅಜಿಂಕ್ಯ ರಹಾನೆ ಸಿ ವೇಡ್ ಬಿ ನೈಲ್ 5
ರೋಹಿತ್ ಶರ್ಮ ಸಿ ನೈಲ್ ಬಿ ಸ್ಟೊಯಿನಿಸ್ 28
ವಿರಾಟ್ ಕೊಹ್ಲಿ ಸಿ ಮ್ಯಾಕ್ಸ್‌ವೆಲ್ ಬಿ ನೈಲ್ 0
ಮನೀಷ್ ಪಾಂಡೆ ಸಿ ವೇಡ್ ಬಿ ನೈಲ್ 0
ಕೇದಾರ್ ಜಾಧವ್ ಸಿ ಕಾರ್ಟ್‌ರೈಟ್ ಬಿ ಸ್ಟೊಯಿನಿಸ್ 40
ಎಂ.ಎಸ್. ಧೋನಿ ಸಿ ವಾರ್ನರ್ ಬಿ ಫಾಕ್ನರ್ 79
ಹಾರ್ದಿಕ್ ಪಾಂಡ್ಯ ಸಿ ಫಾಕ್ನರ್ ಬಿ ಝಂಪ 83
ಭುವನೇಶ್ವರ್ ಕುಮಾರ್ ಔಟಾಗದೆ 32
ಕುಲದೀಪ್ ಯಾದವ್ ಔಟಾಗದೆ 0
ಇತರ 14
ಒಟ್ಟು (50 ಓವರ್‌ಗಳಲ್ಲಿ 7 ವಿಕೆಟಿಗೆ) 281
ವಿಕೆಟ್ ಪತನ: 1-11, 2-11, 3-11, 4-64, 5-87, 6-205, 7-277.
ಬೌಲಿಂಗ್:
ಪ್ಯಾಟ್ ಕಮಿನ್ಸ್ 10-1-44-0
ನಥನ್ ಕೋಲ್ಟರ್ ನೈಲ್ 10-0-44-3
ಜೇಮ್ಸ್ ಫಾಕ್ನರ್ 10-1-67-1
ಮಾರ್ಕಸ್ ಸ್ಟೊಯಿನಿಸ್ 10-0-54-2
ಆ್ಯಡಂ ಝಂಪ 10-0-66-1
ಆಸ್ಟ್ರೇಲಿಯ
ಡೇವಿಡ್ ವಾರ್ನರ್ ಸಿ ಧೋನಿ ಬಿ ಕುಲದೀಪ್ 25
ಹಿಲ್ಟನ್‌ಕಾರ್ಟ್‌ರೈಟ್ ಬಿ ಬುಮ್ರಾ 1
ಸ್ಟೀವನ್ ಸ್ಮಿತ್ ಸಿ ಬುಮ್ರಾ ಬಿ ಪಾಂಡ್ಯ 1
ಟ್ರ್ಯಾವಿಸ್ ಹೆಡ್ ಸಿ ಧೋನಿ ಬಿ ಪಾಂಡ್ಯ 5
ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಪಾಂಡ್ಯ ಬಿ ಚಾಹಲ್ 39
ಮಾರ್ಕಸ್ ಸ್ಟೊಯಿನಿಸ್ ಸಿ ಬದಲಿಗ ಬಿ ಕುಲದೀಪ್ 3
ಮ್ಯಾಥ್ಯೂ ವೇಡ್ ಸ್ಟಂಪ್ಡ್ ಧೋನಿ ಬಿ ಚಾಹಲ್ 9
ಜೇಮ್ಸ್ ಫಾಕ್ನರ್ ಔಟಾಗದೆ 32
ಪ್ಯಾಟ್ ಕಮಿನ್ಸ್ ಸಿ ಬುಮ್ರಾ ಬಿ ಚಾಹಲ್ 9
ನಥನ್ ಕೋಲ್ಟನ್ ನೈಲ್ ಸಿ ಜಾಧವ್ ಬಿ ಕುಮಾರ್ 2
ಆ್ಯಡಂ ಝಂಪ ಔಟಾಗದೆ 5
ಇತರ: 6
ಒಟ್ಟು (21 ಓವರ್‌ಗಳಲ್ಲಿ 9 ವಿಕೆಟಿಗೆ) 137
ವಿಕೆಟ್ ಪತನ: 1-15, 2-20, 3-29, 4-35, 5-76, 6-76, 7-93, 8-109, 9-127
ಬೌಲಿಂಗ್:
ಭುವನೇಶ್ವರ್ ಕುಮಾರ್ 4-0-25-1
ಜಸ್‌ಪ್ರೀತ್ ಬುಮ್ರಾ 4-0-20-1
ಹಾರ್ದಿಕ್ ಪಾಂಡ್ಯ 4-0-28-2
ಕುಲದೀಪ್ ಯಾದವ್ 4-0-33-2
ಯುಜ್ವೇಂದ್ರ ಚಾಹಲ್ 5-0-30-3