Advertisement

ಭಾರತಕ್ಕೆ ಬಂತು ಆಸೀಸ್‌ ತಂಡ

06:00 AM Sep 10, 2017 | Team Udayavani |

ಚೆನ್ನೈ: ಭಾರತದಲ್ಲಿ ಏಕದಿನ ಹಾಗೂ ಟಿ-20 ಸರಣಿಯನ್ನಾಡುವ ಸಲುವಾಗಿ ಆಸ್ಟ್ರೇಲಿಯ ಕ್ರಿಕೆಟಿಗರು 2 ತಂಡಗಳಾಗಿ ಚೆನ್ನೈಗೆ ಆಗಮಿಸಿದರು. ಸರಣಿಯ ಮೊದಲ ಏಕದಿನ ಪಂದ್ಯ ಹಾಗೂ ಒಂದು ಅಭ್ಯಾಸ ಪಂದ್ಯ ಚೆನ್ನೈಯಲ್ಲಿಯೇ ನಡೆಯಲಿದೆ.

Advertisement

ಕಾಂಗರೂ ಕ್ರಿಕೆಟಿಗರ ಒಂದು ತಂಡ ಆಸ್ಟ್ರೇಲಿಯದಿಂದ ಸಿಂಗಾಪುರ ಮಾರ್ಗವಾಗಿ ಶುಕ್ರವಾರ ರಾತ್ರಿ ಚೆನ್ನೈಗೆ ಬಂದಿಳಿಯಿತು. ನಥನ್‌ ಕೋಲ್ಟರ್‌ ನೈಲ್‌, ಜೇಮ್ಸ್‌ ಫಾಕ್ನರ್‌, ಆರನ್‌ ಫಿಂಚ್‌, ಟ್ರ್ಯಾವಿಸ್‌ ಹೆಡ್‌, ಮಾರ್ಕಸ್‌ ಸ್ಟಾಯಿನಿಸ್‌, ಆ್ಯಡಂ ಝಂಪ, ಕೇನ್‌ ರಿಚರ್ಡ್‌ಸನ್‌ ಮೊದಲಾದವರೆಲ್ಲ ಈ ತಂಡದಲ್ಲಿದ್ದರು. ವೇಗಿ ಜೋಶ್‌ ಹ್ಯಾಝಲ್‌ವುಡ್‌ ಗಾಯಾಳಾಗಿ ಹೊರಗುಳಿದುದರಿಂದ ರಿಚರ್ಡ್‌ಸನ್‌ ಅವರನ್ನು ಆಸೀಸ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.ಬಾಂಗ್ಲಾದೇಶದಲ್ಲಿ ಟೆಸ್ಟ್‌ ಸರಣಿ ಮುಗಿಸಿದ ಆಸೀಸ್‌ ತಂಡದ ಕೆಲವು ಸದಸ್ಯರು ಶನಿವಾರ ಬೆಳಗ್ಗೆ ಚೆನ್ನೈ ತಲುಪಿದರು. ಇವರಲ್ಲಿ ನಾಯಕ ಸ್ಟೀವನ್‌ ಸ್ಮಿತ್‌, ಉಪನಾಯಕ ಡೇವಿಡ್‌ ವಾರ್ನರ್‌ ಪ್ರಮುಖರು.

ಪ್ರವಾಸಿ ತಂಡ ಸೆ. 12ರಂದು ಮಂಡಳಿ ಅಧ್ಯಕ್ಷರ ಬಳಗದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ಗುರುಕೀರತ್‌ ಸಿಂಗ್‌ ಮಾನ್‌ ಆತಿಥೇಯ ತಂಡವನ್ನು ಮುನ್ನಡೆಸಲಿದ್ದು, ಭಾರತದ ಮಾಜಿ ಕ್ರಿಕೆಟಿಗ ಹೇಮಾಂಗ್‌ ಬದಾನಿ ಕೋಚ್‌ ಆಗಿದ್ದಾರೆ. ನಿತೀಶ್‌ ರಾಣ, ವಾಷಿಂಗ್ಟನ್‌ ಸುಂದರ್‌, ರಾಹುಲ್‌ ತ್ರಿಪಾಠಿ ಮೊದಲಾದ ಐಪಿಎಲ್‌ ಸ್ಟಾರ್‌ ಆಟಗಾರರು ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next