ಅಹಮದಬಾದ್: ಭಾರತ – ಆಸ್ಟೇಲಿಯಾ ನಡುವಿನ ಬಾರ್ಡರ್ ಗಾವಸ್ಕರ್ ಟ್ರೋಫಿಯ ಅಂತಿಮ ಮುಖಾಮುಖಿಯಲ್ಲಿ ಆಸ್ಟೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.
ಎರಡೂ ದೇಶಗಳ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಆ್ಯಂಟನಿ ಅಲ್ಬನೀಸ್ ಅವರ ಸಮ್ಮುಖದಲ್ಲಿ ಟಾಸ್ ಪ್ರಕ್ರಿಯೆ ನಡೆಯಿತು. ಎರಡೂ ತಂಡಗಳಿಗೆ ಪ್ರಧಾನಿಗಳು ಶುಭಕೋರಿದರು.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದೃಷ್ಟಿಯಿಂದಲೂ ಈ ಪಂದ್ಯ ಮಹತ್ವ ಪಡೆದಿದೆ. ಇಂದೋರ್‌ನಲ್ಲಿ ತಿರುಗೇಟು ನೀಡುವ ಮೂಲಕ ಒಂದು ಫೈನಲ್ ಸ್ಥಾನ ಆಸ್ಟ್ರೇಲಿಯ ಪಾಲಾಗಿದೆ. ಇಲ್ಲಿಯೂ ರೋಹಿತ್ ಪಡೆ ಜಯಿಸಿದ್ದರೆ ಭಾರತದ ಫೈನಲ್ ಅಧಿಕೃತಗೊಳ್ಳುತ್ತಿತ್ತು. ಆದರೀಗ ಟೀಮ್ ಇಂಡಿಯಾ ಅಹ್ಮದಾಬಾದ್ ಗೆಲುವನ್ನು ಅಥವಾ ಡ್ರಾ ಫಲಿತಾಂಶವನ್ನು ನಂಬಿಕೊಂಡು ಕೂರಬೇಕಿದೆ. ಇದನ್ನು ಗೆದ್ದರೆ ಭಾರತ ಸತತ 2ನೇ ಸಲವೂ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿದಂತಾಗುತ್ತದೆ. ಅಕಸ್ಮಾತ್ ಈ ಸರಣಿ 2-2 ಅಥವಾ 2-1ರಿಂದ ಮುಗಿದರೆ ಲೆಕ್ಕಾಚಾರ ಬದಲಾಗಬಹುದು. ನ್ಯೂಜಿಲ್ಯಾಂಡ್ ಎದುರಿನ ಸರಣಿಯನ್ನು ಶ್ರೀಲಂಕಾ 2-0 ಅಂತರದಿಂದ ಗೆದ್ದರೆ ಭಾರತ ಫೈನಲ್ ರೇಸ್‌ನಿಂದ ಹೊರಬೀಳಲಿದೆ!
ಶಮಿ ಪುನರಾಗಮನ:
ತೃತೀಯ ಪಂದ್ಯದ ವೇಳೆ ವಿಶ್ರಾಂತಿ ಪಡೆದಿದ್ದ ವೇಗಿ ಮೊಹಮ್ಮದ್ ಶಮಿ ಅಹ್ಮದಾಬಾದ್‌ನಲ್ಲಿ ಕಂಬ್ಯಾಕ್ ಮಾಡಿದ್ದಾರೆ. ಇವರಿಗೆ ಜೋಡಿ ಯಾಗಿ ಉಮೇಶ್ ಯಾದವ್ ಇದ್ದಾರೆ.
ತಂಡಗಳು:
ಭಾರತ: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್(ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಉಮೇಶ್ ಯಾದವ್
ಆಸ್ಟ್ರೇಲಿಯ:
ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್ಸ್ಕಾಂಬ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ಕೀಪರ್), ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮನ್, ನಾಥನ್ ಲಿಯಾನ್