Advertisement

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

12:48 AM Apr 28, 2024 | Team Udayavani |

ಮಡಿಕೇರಿ: ಕೊಡವ ಕೌಟುಂಬಿಕ ಹಾಕಿ ಟೂರ್ನಿ ಅಂತಿಮಘಟ್ಟಕ್ಕೆ ತಲುಪಿದೆ. ಕುಂಡ್ಯೋಳಂಡ ಹಾಕಿ ಪಂದ್ಯಾವಳಿಯಲ್ಲಿ ಶನಿವಾರ ಸೆಮಿಫೈನಲ್‌ನಲ್ಲಿ ಆಡಿದ ನೆಲ್ಲಮಕ್ಕಡ ಮತ್ತು ಚೇಂದಂಡ ತಂಡಗಳು ಗೆದ್ದು ಫೈನಲ್‌ಗೇರಿವೆ. ನಾಪೋಕ್ಲುವಿನಲ್ಲಿ ರವಿವಾರ ಫೈನಲ್‌ ನಡೆಯಲಿದ್ದು, ಪಂದ್ಯ ಬೆಳಗ್ಗೆ 11.30ಕ್ಕೆ ಆರಂಭವಾಗಲಿದೆ.

Advertisement

ಶನಿವಾರ ನಡೆದ ಸೆಮಿಫೈನಲ್‌ ಕಳೆದ ಬಾರಿಯ ಚಾಂಪಿ ಯನ್‌ ಕುಪ್ಪಂಡ ತಂಡ ನೆಲ್ಲಮಕ್ಕಡ ತಂಡದ ವಿರುದ್ಧ ಹಾಗೂ ಕುಲ್ಲೇಟಿರ ತಂಡ ಚೇಂದಂಡ ವಿರುದ್ಧ ಸೋಲನುಭವಿಸಿತು. ಮೊದಲ ಸೆಮಿಫೈನಲ್ಸ್‌ನಲ್ಲಿ ಕುಲ್ಲೇಟಿರ ತಂಡದ ವಿರುದ್ಧ ಚೇಂದಂಡ ತಂಡ 3-1 ಗೋಲುಗಳಿಂದ ಜಯ ಸಾಧಿಸಿತು.

2ನೇ ಸೆಮಿಫೈನಲ್‌ನಲ್ಲಿ, ಕಳೆದ ಬಾರಿ ಚಾಂಪಿಯನ್‌ ಕುಪ್ಪಂಡ ತಂಡದ ವಿರುದ್ಧ ನೆಲ್ಲಮಕ್ಕಡ ತಂಡಕ್ಕೆ 4-2 ಗೋಲುಗಳ ಜಯ ಲಭಿಸಿತು.

ಗಿನ್ನೆಸ್‌ ಅಧಿಕಾರಿಗಳ ಭೇಟಿ
ವಿಶ್ವದ ಬೃಹತ್‌ ಫೀಲ್ಡ್‌ ಹಾಕಿ ಕೂಟ ಎಂಬ ಗಿನ್ನೆಸ್‌ ದಾಖಲೆಯತ್ತ ಕೊಡವ ಕಪ್‌ ಹೆಜ್ಜೆಯಿಟ್ಟಿದೆ. ರವಿವಾರ ಗಿನ್ನೆಸ್‌ ಅಧಿಕಾರಿಗಳು ಫೈನಲ್‌ ಪಂದ್ಯಕ್ಕೆ ಆಗಮಿಸಲಿದ್ದು, ದಾಖಲೆಗಳನ್ನು ಪರಿಶೀಲಿಸಲಿದ್ದಾರೆ. ಈ ಬಾರಿ ಕೊಡವ ಹಾಕಿಯಲ್ಲಿ 360 ತಂಡಗಳು ನೋಂದಣಿ ಮಾಡಿಕೊಂಡಿದ್ದವು. ಇದರಲ್ಲಿ 340 ತಂಡಗಳು ಕ್ರೀಡಾಕೂಟದಲ್ಲಿ ಭಾಗಿಯಾಗಿವೆ. ಈ ಹಿನ್ನೆಲೆಯಲ್ಲಿ ಕೂಟ ದಾಖಲೆ ಪುಸ್ತಕ ಸೇರುವತ್ತ ಸಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next