Advertisement

Australia ಹಾಕಿ ಸರಣಿ: ಭಾರತ ಸೋಲಿನ ಆರಂಭ

12:36 AM Apr 07, 2024 | Team Udayavani |

ಪರ್ತ್‌: ಆಸ್ಟ್ರೇಲಿಯಲ್ಲಿ ಹಾಕಿ ಸರಣಿಯನ್ನು ಆಡಲಿಳಿದಿರುವ ಭಾರತದ ಪುರುಷರ ತಂಡ ಸೋಲಿನ ಆರಂಭ ಕಂಡಿದೆ. ಶನಿವಾರ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕಾಂಗರೂ ಪಡೆ ಭಾರತವನ್ನು 5-1 ಗೋಲುಗಳ ಭಾರೀ ಅಂತರದಿಂದ ಮಣಿಸಿದೆ.

Advertisement

ಆಸ್ಟ್ರೇಲಿಯ ಆರಂಭದಿಂದ ಅಂತ್ಯದ ತನಕ ಪಂದ್ಯವನ್ನು ತನ್ನ ಹಿಡಿತದಲ್ಲೇ ಇರಿಸಿಕೊಂಡು ಪ್ರಭುತ್ವ ಸಾಧಿಸಿತು. ಹೀಗಾಗಿ ಕನಿಷ್ಠ ಹೋರಾಟ ನೀಡಲಿಕ್ಕೂ ಭಾರತದಿಂದ ಸಾಧ್ಯವಾಗಲಿಲ್ಲ. ಭಾರತದ ಏಕೈಕ ಗೋಲು 47ನೇ ನಿಮಿಷ ದಲ್ಲಿ ಗುರ್ಜಂತ್‌ ಸಿಂಗ್‌ ಅವರಿಂದ ದಾಖಲಾಯಿತು. ಆಸೀಸ್‌ ಪರ ಟಾಮ್‌ ವಿಕ್‌ಹ್ಯಾಮ್‌ (20ನೇ, 38ನೇ ನಿಮಿಷ), ಟಿಮ್‌ ಬ್ರ್ಯಾಂಡ್‌ (3ನೇ ನಿಮಿಷ), ಜೋಯೆಲ್‌ ರಿಂಟಾಲ (37ನೇ ನಿಮಿಷ) ಮತ್ತು ಫ್ಲಿನ್‌ ಒಗಿಲ್ವಿ (57ನೇ ನಿಮಿಷ) ಗೋಲು ಬಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next