Advertisement

ಶ್ರೇಯಸ್‌ ಅಯ್ಯರ್‌ ಫಿಟ್‌: ಆಸ್ಟ್ರೇಲಿಯ ಎದುರಿನ ಪಂದ್ಯಕ್ಕೆ ಲಭ್ಯ: ಜಯ್‌ ಶಾ

11:36 PM Feb 14, 2023 | Team Udayavani |

ಹೊಸದಿಲ್ಲಿ: ಬೆನ್ನು ನೋವಿಗೆ ಸಿಲುಕಿದ್ದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರನ್ನು ಭಾರತದ ಟೆಸ್ಟ್‌ ತಂಡವನ್ನು ಸೇರಿಕೊಳ್ಳಲಿದ್ದು, ಆಸ್ಟ್ರೇಲಿಯ ಎದುರಿನ ದ್ವಿತೀಯ ಪಂದ್ಯದ ಆಯ್ಕೆಗೆ ಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ತಿಳಿಸಿದ್ದಾರೆ.

Advertisement

ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಂಡ ಬಳಿಕ ಶ್ರೇಯಸ್‌ ಅಯ್ಯರ್‌ ಬೆನ್ನುನೋವಿನ ಸಮಸ್ಯೆಗೆ ಸಿಲುಕಿದ್ದರು.

ಹೀಗಾಗಿ ನ್ಯೂಜಿಲ್ಯಾಂಡ್‌ ಎದುರಿನ ಏಕದಿನ ಸರಣಿಯಲ್ಲಿ, ಆಸ್ಟ್ರೇಲಿಯ ಎದುರಿನ ನಾಗ್ಪುರ ಟೆಸ್ಟ್‌ ನಲ್ಲಿ ಆಡಲಾಗಲಿಲ್ಲ. ಬೆಂಗಳೂರಿನ ಎನ್‌ಸಿಎಯಲ್ಲಿ ಚಿಕಿತ್ಸೆಗೆ ಒಳಗಾದ ಅಯ್ಯರ್‌, ಈಗ ಪೂರ್ತಿ ಚೇತರಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next