Advertisement

T20 ; ಇಂಗ್ಲಿಸ್ ಅಮೋಘ ಶತಕದ ಜೋಶ್: ಭಾರತಕ್ಕೆ 209 ಗೆಲುವಿನ ಗುರಿ

08:40 PM Nov 23, 2023 | Team Udayavani |

ವಿಶಾಖಪಟ್ಟಣ: ಇಲ್ಲಿನ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆಯುತ್ತಿರುವ ಟಿ 20 ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ಪ್ರವಾಸಿ ಆಸ್ಟ್ರೇಲಿಯ ಜೋಶ್ ಇಂಗ್ಲಿಸ್ ಅವರ ಅಮೋಘ ಶತಕದ ನೆರವಿನಿಂದ ಭಾರತಕ್ಕೆ ಗೆಲ್ಲಲು 209 ರನ್ ಗಳ ಗುರಿ ಮುಂದಿಟ್ಟಿದೆ.

Advertisement

ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆಸೀಸ್ ಆರಂಭದಿಂದಲೂ ಅಬ್ಬರಿಸಿತು. 13 ರನ್ ಗಳಿಸಿದ್ದ ಮ್ಯಾಥ್ಯೂ ಶಾರ್ಟ್ ಅವರನ್ನು ರವಿ ಬಿಷ್ಣೋಯಿ ಕ್ಲೀನ್ ಬೌಲ್ಡ್ ಮಾಡಿದರು. ಸ್ಟೀವನ್ ಸ್ಮಿತ್ 52 ರನ್ ಗಳಿಸಿದ್ದ ವೇಳೆ ರನೌಟ್ ಆದರು.

ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಜೋಶ್ ಇಂಗ್ಲಿಸ್ 47 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. 110(50 ಎಸೆತ) ರನ್ ಗಳಿಸಿದ್ದ ವೇಳೆ ಪ್ರಸಿದ್ಧ್ ಎಸೆದ ಚೆಂಡನ್ನು ಯಶಸ್ವಿ ಜೈಸ್ವಾಲ್ ಕೈಗಿತ್ತು ನಿರ್ಗಮಿಸಿದರು.

ಮಾರ್ಕಸ್ ಸ್ಟೊಯಿನಿಸ್7, ಟಿಮ್ ಡೇವಿಡ್ 19ರನ್ ಗಳಿಸಿದರು. 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್ ಕಲೆ ಹಾಕಿತು.

ಮುಕೇಶ್ ಕುಮಾರ್ ಅವರು ಕೊನೆಯ ಓವರ್ ಅನ್ನು ಅದ್ಭುತವಾಗಿ ಎಸೆದರು. 5 ರನ್ ಮಾತ್ರ ಬಿಟ್ಟುಕೊಟ್ಟರು. 4 ಓವರ್ ಎಸೆದು 29 ರನ್ ಮಾತ್ರ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next