Advertisement
ಮಂಗಳವಾರ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ 6 ವಿಕೆಟಿಗೆ 208 ರನ್ ಪೇರಿಸಿದರೆ, ಆಸ್ಟ್ರೇಲಿಯ 19.2 ಓವರ್‌ಗಳಲ್ಲಿ 6 ವಿಕೆಟಿಗೆ 211 ರನ್ ಹೊಡೆದು ಜಯಭೇರಿ ಮೊಳಗಿಸಿತು.
Related Articles
Advertisement
ಭಾರತದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್. ಪಾಂಡ್ಯ ಕೊನೆಯ ಹಂತದಲ್ಲಿ ಸಿಡಿದು ನಿಂತು ಅಜೇಯ 71 ರನ್ ಹೊಡೆದರು. ಇದು ಅವರ 2ನೇ ಅರ್ಧ ಶತಕ. ಕೇವಲ 30 ಎಸೆತ ಎದುರಿಸಿದ ಪಾಂಡ್ಯ 7 ಫೋರ್ ಹಾಗೂ 5 ಸಿಕ್ಸರ್ ಬಾರಿಸಿ ತಮ್ಮ ಪವರ್ ತೋರಿದರು. ಇದರಲ್ಲಿ 3 ಸಿಕ್ಸರ್ ನಥನ್ ಎಲ್ಲಿಸ್ ಎಸೆದ ಅಂತಿಮ ಓವರ್‌ನ ಕೊನೆಯ 3 ಎಸೆತಗಳಲ್ಲಿ ಸಿಡಿಯಿತು. ಇದರಿಂದ ತಂಡದ ಮೊತ್ತ ಇನ್ನೂರರ ಗಡಿ ದಾಟಿತು. ಪಾಂಡ್ಯ ಸಾಹಸದಿಂದಾಗಿ ಭಾರತ ಅಂತಿಮ 5 ಓವರ್‌ಗಳಲ್ಲಿ 67 ರನ್ ಸೂರೆಗೈದಿತು.
ಆರಂಭದಲ್ಲಿ ಬಿರುಸಿನ ಆಟಕ್ಕೆ ಇಳಿದವರು ಕೆ.ಎಲ್. ರಾಹುಲ್. 2 ವಿಕೆಟ್ ಬೇಗನೇ ಉರುಳಿದರೂ ಆಸೀಸ್ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿದ ರಾಹುಲ್ 35 ಎಸೆತಗಳಿಂದ 55 ರನ್ ಹೊಡೆದರು. ಇದು ಅವರ 18ನೇ ಅರ್ಧ ಶತಕ. ಸಿಡಿಸಿದ್ದು 4 ಬೌಂಡರಿ, 3 ಸಿಕ್ಸರ್. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಸಿಡಿದು ನಿಂತರು. ಅವರ 46 ರನ್ ಕೇವಲ 25 ಎಸೆತಗಳಿಂದ ಬಂತು (2 ಫೋರ್, 4 ಸಿಕ್ಸರ್).
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತಕ್ಕೆ ನಾಯಕ ರೋಹಿತ್ ಶರ್ಮ ಬಿರುಸಿನ ಆರಂಭದ ಸೂಚನೆಯಿತ್ತರು. ಕಮಿನ್ಸ್‌ಗೆ ಬೌಂಡರಿ, ಸಿಕ್ಸರ್ ರುಚಿ ತೋರಿಸಿದರು. ಆದರೆ ಇನ್ನಿಂಗ್ಸ್ ವಿಸ್ತರಿಸಲು ಸಾಧ್ಯವಾಗಲಿಲ್ಲ. ಹೇಝಲ್‌ವುಡ್ ಆಸೀಸ್‌ಗೆ ದೊಡ್ಡದೊಂದು ಬ್ರೇಕ್ ಒದಗಿಸಿದರು. ಡೀಪ್ ಸ್ಕ್ವೇರ್ ಲೆಗ್‌ನಲ್ಲಿದ್ದ ನಥನ್ ಎಲ್ಲಿಸ್ ಸೊಗಸಾದ ಕ್ಯಾಚ್ ಮೂಲಕ ಭಾರತದ ಕಪ್ತಾನನ ಆಟಕ್ಕೆ ತೆರೆ ಎಳೆದರು. ಭಾರತದ ಸ್ಕೋರ್ 21 ರನ್ ಆಗಿತ್ತು.
ಏಷ್ಯಾ ಕಪ್‌ನಲ್ಲಿ ಸೆಂಚುರಿ ಬಾರಿಸಿ ಹಳಿಯೇರಿದ್ದ ವಿರಾಟ್ ಕೊಹ್ಲಿ ಇಲ್ಲಿ ಮತ್ತೆ ವೈಫಲ್ಯ ಕಂಡರು. 7 ಎಸೆತ ಎದುರಿಸಿದ ಕೊಹ್ಲಿ ಆಟ ಎರಡೇ ರನ್ನಿಗೆ ಮುಗಿಯಿತು. ನಥನ್ ಎಲ್ಲಿಸ್ ಈ ವಿಕೆಟ್ ಹಾರಿಸಿದರು. 35 ರನ್ನಿಗೆ 2 ವಿಕೆಟ್ ಬಿತ್ತು. ಪವರ್ ಪ್ಲೇ ಅವಧಿಯಲ್ಲಿ ಭಾರತ 46 ರನ್ ಗಳಿಸಿತ್ತು. 10 ಓವರ್ ಮುಕ್ತಾಯಕ್ಕೆ ಮೊತ್ತ 86ಕ್ಕೆ ಏರಿತು.