Advertisement

T20 ; ಅಫ್ಘಾನ್ ವಿರುದ್ಧ ಅಬ್ಬರದ ಶತಕ ಸಿಡಿಸಿದ ರೋಹಿತ್: ರಿಂಕು ಭರ್ಜರಿ ಸಾಥ್

08:49 PM Jan 17, 2024 | Team Udayavani |

ಬೆಂಗಳೂರು: ಅಫ್ಘಾನಿಸ್ಥಾನ ವಿರುದ್ಧ ಬುಧವಾರ ಇಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಸರಣಿಯ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮ ಸಮಯೋಚಿತ ಅತ್ಯಮೋಘ ಬ್ಯಾಟಿಂಗ್ ಪ್ರದರ್ಶನ ತೋರಿ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದರು.

Advertisement

20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ ಕಲೆ ಹಾಕಿರುವ ಭಾರತ ತಂಡ ಅಫ್ಘಾನ್ ತಂಡಕ್ಕೆ ಗೆಲ್ಲಲು ಸವಾಲಿನ ಮೊತ್ತವನ್ನು ಎದುರಿಟ್ಟಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ಅಫ್ಘಾನ್ ಬೌಲರ್ ಗಳು ಆರಂಭದಲ್ಲಿ ಭಾರಿ ಶಾಕ್ ನೀಡಿದರು. ತಂಡ 18 ರನ್ ಗಳಿಸಿದ್ದ ವೇಳೆ ಯಶಸ್ವಿ ಜೈಸ್ವಾಲ್(4) ಔಟಾದರು. ಆ ಬಳಿಕ ಕೊಹ್ಲಿ ಶೂನ್ಯಕ್ಕೆ ನಿರ್ಗಮಿಸಿದರು. ಬೆನ್ನಲ್ಲೇ ಶಿವಂ ದುಬೆ 1 ರನ್ ಗಳಿಸಿ ನಿರ್ಗಮಿಸಿದರು. ಸಂಜು ಸ್ಯಾಮ್ಸನ್ ಕೂಡ 0 ಸುತ್ತಿದರು. 22 ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ರೋಹಿತ್ ಶರ್ಮ ಜವಾಬ್ದಾರಿಯುತ ಆಟವಾಡಿದರು. ಮೊದಲ ಎರಡೂ ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿ ಭಾರಿ ನೋವು ಅನುಭವಿಸಿದ್ದ ರೋಹಿತ್ ಇಂದು ಅಬ್ಬರಿಸಿದರು.64 ಎಸೆತಗಳಲ್ಲಿ 103 ರನ್ ಗಳಿಸಿ ಶತಕದ ಆಟವಾಡಿ ಸಾಮರ್ಥ್ಯ ಮೆರೆದರು. ಅವರಿಗೆ ಟಿ20 ಭರವಸೆಯ ಆಟಗಾರ ರಿಂಕು ಸಿಂಗ್ ಅದ್ಭುತ ಸಾಥ್ ನೀಡಿದರು.

ರೋಹಿತ್ ಶರ್ಮ 69 ಎಸೆತಗಳಲ್ಲಿ 121 ರನ್ ಗಳಿಸಿ ಅಜೇಯರಾಗಿ ಉಳಿದರು.11 ಬೌಂಡರಿ ಮತ್ತು ಭರ್ಜರಿ 8 ಸಿಕ್ಸರ್ ಅವರ ಇನ್ನಿಂಗ್ಸ್ ನಲ್ಲಿ ಒಳಗೊಂಡಿತ್ತು. ರಿಂಕು ಅವರು 39 ಎಸೆತಗಳಲ್ಲಿ 69 ರನ್ ಗಳಿಸಿದರು.2 ಸಿಕ್ಸರ್ ಮತ್ತು 6 ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿದರು. ರಿಂಕು ಸಿಂಗ್ ಅವರು ಕರೀಂ ಜನತ್ ಅವರು ಎಸೆದ ಕೊನೆಯ ಓವರ್ ನಲ್ಲಿ 5 ಸಿಕ್ಸರ್ ಸಿಡಿಸಿದರು.

ಫರೀದ್ ಅಹ್ಮದ್ ಮೂರು ವಿಕೆಟ್ ಕಬಳಿಸಿ ಆರಂಭದಲ್ಲಿ ಶಾಕ್ ನೀಡಿದರೂ ಉಳಿದ ಆಟಗಾರಿಗೆ ರೋಹಿತ್ -ರಿಂಕು ಜೋಡಿಯ ಆಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ.

Advertisement

ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು
ರೋಹಿತ್ ಶರ್ಮ-5
ಸೂರ್ಯಕುಮಾರ್ ಯಾದವ್-4
ಗ್ಲೆನ್ ಮ್ಯಾಕ್ಸ್‌ವೆಲ್-4

Advertisement

Udayavani is now on Telegram. Click here to join our channel and stay updated with the latest news.

Next