Advertisement
ಭಾರತಕ್ಕೆ ಇದು ಕತಾರ್ ಎದುರಿನ ಸೆಕೆಂಡ್ ಲೆಗ್ ಪಂದ್ಯವಾಗಿದೆ. 2019ರ ಮೊದಲ ಮುಖಾಮುಖೀಯ ವೇಳೆ ಗೋಲ್ ಲೆಸ್ ಡ್ರಾ ಸಾಧಿಸಿದ್ದು ಭಾರತ ಅಮೋಘ ಸಾಧನೆ ಎನಿಸಿತ್ತು.
ಇತ್ತ ಭಾರತ ಯುಎಇ ವಿರುದ್ಧದ ಫ್ರೆಂಡ್ಲಿ ಮ್ಯಾಚ್‌ನಲ್ಲಿ 0-6 ಗೋಲುಗಳ ಆಘಾತಕ್ಕೆ ಸಿಲುಕಿತ್ತು. ಹಾಗೆಯೇ ಕಳೆದ ತಿಂಗಳು ಕೋಲ್ಕತಾದಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಶಿಬಿರ ರದ್ದುಗೊಂಡದ್ದು ಭಾರತೀಯರ ಅಭ್ಯಾಸಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ನಾಯಕ ಸುನೀಲ್ ಚೆಟ್ರಿ ಕೋವಿಡ್ ಕಾರಣದಿಂದ ಎರಡೂ ಅಭ್ಯಾಸ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ.
ಫಿಫಾ ರ್‍ಯಾಂಕಿಂಗ್‌ನಲ್ಲೂ ಕತಾರ್ ಭಾರತಕ್ಕಿಂತ ಬಹಳಷ್ಟು ಮೇಲಿದೆ. ಕತಾರ್ 58, ಭಾರತ 105ನೇ ರ್‍ಯಾಂಕಿಂಗ್ ಹೊಂದಿದೆ. 5 ಪಂದ್ಯಗಳಿಂದ 3 ಅಂಕ ಸಂಪಾದಿಸಿರುವ ಭಾರತ “ಇ’ ವಿಭಾಗದಲ್ಲಿ 4ನೇ ಸ್ಥಾನದಲ್ಲಿದೆ. ಕತಾರ್ ಆಕ್ರಮಣವನ್ನು ಚೆಟ್ರಿ ಪಡೆ ತಡೆದು ನಿಂತೀತೇ ಎಂಬುದು ದೊಡ್ಡ ಪ್ರಶ್ನೆ.