Advertisement

ಇಂಡಿಯಾ-ಅಮೆರಿಕ ಟ್ರೇಡ್‌ ವಾರ್‌

09:22 AM Jul 24, 2019 | Team Udayavani |

ಮಣಿಪಾಲ: ಭಾರತ – ಅಮೆರಿಕ ಮಧ್ಯೆ ನಡೆಯುತ್ತಿರುವ ಕೆಲವು ವ್ಯಾಪಾರ ಸಂಬಂಧಿ ಬೆಳವಣಿಗೆಗಳು ದೇಶದ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿವೆ. ಅಮೆರಿಕದಿಂದ ಆಮದಾಗು ತ್ತಿರುವ 28 ಉತ್ಪನ್ನಗಳ ಮೇಲೆ ಭಾರತ ನೀಡಿದ್ದ ತೆರಿಗೆ ವಿನಾಯಿತಿಯನ್ನು ಕಳೆದ ತಿಂಗಳು ಕಡಿತಗೊಳಿಸಿದೆ. ಅಮೆರಿಕ ಇದರಿಂದ ಹಾನಿಗೊಳಗಾಗಿದ್ದು, ಭಾರತ ವಿಧಿಸಿದ ಹೆಚ್ಚುವರಿ ತೆರಿಗೆಯನ್ನು ತೆಗೆದು ಹಾಕುವಂತೆ ಕೋರಿಕೊಂಡಿದೆ. ಆದರೆ ಅಮೆರಿಕದ ಮನವಿಯನ್ನು ಭಾರತ ತಿರಸ್ಕರಿಸಿದೆ.

Advertisement

ಆಗಿದ್ದೇನು?
ಅಮೆರಿಕ ಭಾರತದ ಜತೆ ವ್ಯಾಪಾರ ವಹಿವಾಟಿನಲ್ಲಿ ಸಹಕಾರ ಕ್ರಮವನ್ನು ಅನುಸರಿಸಲಾಗಿತ್ತು. ತಾನು ನೀಡಿದ್ದ “ಆದ್ಯತೆಯ ರಾಷ್ಟ್ರ’ ಸ್ಥಾನಮಾನವನ್ನು ಅಮೆರಿಕ ಜೂನ್‌ನಲ್ಲಿ ಹಿಂದೆಗೆದುಕೊಂಡಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದಿಂದ ಆಮದಾಗುವ 28 ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆ ಯನ್ನು ಭಾರತ ವಿಧಿಸಿತ್ತು. ಇದು ಈ ಎರಡು ರಾಷ್ಟ್ರಗಳ ವ್ಯಾಪಾರ ಕ್ಷೇತ್ರದಲ್ಲಿ ಮುಸುಕಿನ ಗುದ್ದಾಟಕ್ಕೆ ಕಾರಣ.

ಜೂನ್‌ನಲ್ಲಿ ಏನಾಯಿತು?
ಜೂನ್‌ 5ರಂದು ಅಮೆರಿಕ ಭಾರತಕ್ಕೆ ನೀಡಿದ್ದ ಆದ್ಯತೆಯ ರಾಷ್ಟ್ರ ಸ್ಥಾನಮಾನ (GSP- Generalised System of Preference)ವನ್ನು ಹಿಂತೆಗೆದುಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಅದೇ ದಿನ ಪ್ರಸ್ತಾವನೆ ಹಂತದಲ್ಲಿದ್ದ ಹೆಚ್ಚುವರಿ ತೆರಿಗೆ ವಿಧಿಸುವ ಯೋಜನೆಯನ್ನು ಭಾರತ ಅಮೆರಿಕದ ಮೇಲೆ ಹೇರಿದೆ.

ಪ್ರಮುಖ ಆಮದುಗಳು
ಸೇಬು, ಬಾದಾಮ್‌, ವಾಲ್‌ನಟ್‌, ಸಿಗಡಿ, ಚಣ, ಮಸೂರ್‌ ದಾಲ್‌, ಕಡಲೆ, ಬೋರಿಕ್‌ ಆಮ್ಲ ಸೇರಿದಂತೆ 28 ಉತ್ಪನ್ನಗಳ ಮೇಲೆ ಭಾರತದ ಹೆಚ್ಚುವರಿ ತೆರಿಗೆ ಹೇರಿದೆ. ಇದರಿಂದ ಭಾರತ ಖರೀದಿಸಬೇಕಾದರೆ ಈಗಿರುವ ದರಕ್ಕಿಂತ ಶೇಕಡ 30 ಅನ್ನು ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ. ಬಾದಾಮಿ ಶೇ. 30ರಿಂದ 120 ಶೇಕಡದಷ್ಟು ದರ ಹೆಚ್ಚಾಲಿದೆ. ಉಳಿದ 27 ಉತ್ಪನ್ನಗಳ ದರಗಳು ಶೇ. 30-70 ಹೆಚ್ಚಾಗಲಿವೆ. ಈ ಹೆಚ್ಚುವರಿ ಹೊರೆ ಗ್ರಾಹಕರ ಮೇಲೆ ಬೀಳಲಿದೆ. ಇದರಿಂದ ಭಾರತಕ್ಕೆ ಸುಮಾರು 200 ಮಿಲಿಯನ್‌ ಡಾಲರ್‌ ಆದಾಯ ಹೆಚ್ಚುವರಿಯಾಗಿ ದೊರೆಯಲಿದೆ.

ಅಮೆರಿಕ ಏನು ಮಾಡಿತ್ತು?
ಕಳೆದ ವರ್ಷ ಜೂನ್‌ ತಿಂಗಳಲ್ಲಿ ಭಾರತದಿಂದ ಆಮದಾಗುವ ಇಂಡಿಯನ್‌ ಸ್ಟೀಲ್‌ ಮೇಲೆ 10 ಶೇ. ಮತ್ತು ಅಲ್ಯುಮಿನಿಯಂಗಳ ಮೇಲೆ ಶೇ. 25 ಹೆಚ್ಚುವರಿ ತೆರಿಗೆಗಳನ್ನು ನೂತನ ಟ್ರಂಪ್‌ ಸರಕಾರ ವಿಧಿಸಿತ್ತು. ಇದರಿಂದ ಭಾರತ ಇಲ್ಲಿನ ವಸ್ತುಗಳನ್ನು ಅಮೆರಿಕದಲ್ಲಿ ಪರಿಚಯಿಸಲು ಹೆಚ್ಚುವರಿ ಹಣವನ್ನು ತೆರಿಗೆ ರೂಪದಲ್ಲಿ ಪಾವತಿ ಮಾಡಬೇಕಾಗಿತ್ತು.

Advertisement

ಮಾರುಕಟ್ಟೆ ಮೇಲೆ ಹಾನಿ
ಡೊನಾಲ್ಡ್‌ ಟ್ರಂಪ್‌ 2017ರಲ್ಲಿ ಅಧ್ಯಕ್ಷರಾದ ಬಳಿಕ ಪೂರ್ಣವಾಗಿ ಅಮೆರಿಕ ಪರವಾದ ನಿಲುವು ಮತ್ತು ವಿದೇಶಗಳ ಮೇಲೆ ಕಠಿನ ಕ್ರಮಗಳನ್ನು ಸಾರುತ್ತಾ ಬಂದಿದ್ದಾರೆ. ಇದೀಗ ವ್ಯಾಪಾರ ಕ್ಷೇತ್ರಕ್ಕೂ ಅದು ಕಾಲಿಟ್ಟಿದೆ. ಈ ಉಭಯ ದೇಶಗಳ ಈ ನಿರ್ಧಾರ ಮಾರುಕಟ್ಟೆಯಲ್ಲಿ ಪ್ರತಿಕೂಲ ಪರಿಣಾಮವನ್ನು ತಂದಿರಿಸಿದೆ.

ಮಣಿಪಾಲ, ಸ್ಪೆಷಲ್‌ ಡೆಸ್ಕ್

Advertisement

Udayavani is now on Telegram. Click here to join our channel and stay updated with the latest news.

Next