Advertisement

ಬಂಗಾಳ ಕೊಲ್ಲಿಯಲ್ಲಿ ಕ್ವಾಡ್‌ ದೇಶಗಳ ಮಲಬಾರ್‌ ಸಮರಾಭ್ಯಾಸ ಆರಂಭ

10:34 AM Nov 04, 2020 | Nagendra Trasi |

ನವದೆಹಲಿ: ದಕ್ಷಿಣ ಏಷ್ಯಾ ಸಮುದ್ರದಲ್ಲಿ ಚೀನಾದ ಕಿರಿಕ್‌ ಹೆಚ್ಚಿರುವಂತೆಯೇ ಭಾರತ, ಅಮೆರಿಕ, ಜಪಾನ್‌ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡ ಕ್ವಾಡ್‌ ದೇಶಗಳು ಬಂಗಾಳ ಕೊಲ್ಲಿಯಲ್ಲಿ ಮಲಬಾರ್‌ ಸಮರಾಭ್ಯಾಸ ಶುರು ಮಾಡಿವೆ.

Advertisement

ಈ ನಾಲ್ಕು ದೇಶಗಳಿಗೂ ಚೀನಾ ಒಂದಿಲ್ಲೊಂದು ರೀತಿಯಲ್ಲಿ ಕಿರಿಕ್‌ ಮಾಡಿಕೊಂಡು ಬರುತ್ತಲೇ ಇದೆ. ಅದರಲ್ಲೂ ಕೊರೊನಾ ಕಾಡಲು ಶುರು ಮಾಡಿದ ಮೇಲೆ ಅದರ ಉಪಟಳ ಇನ್ನಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕ್ವಾಡ್‌ ದೇಶಗಳ ಈ ಸಮರಾಭ್ಯಾಸ ಮಹತ್ವ ಪಡೆದು ಕೊಂಡಿದೆ.

ಮಂಗಳವಾರ ಶುರುವಾಗಿರುವ 24ನೇ ಮಲಬಾರ್‌ ಸಮ ರಾಭ್ಯಾಸದಲ್ಲಿ ಭಾರತೀಯ ನೌಕಾಪಡೆ, ಅಮೆರಿಕದ ನೌಕಾ ಪಡೆ, ಜಪಾನ್‌ನ ಮೆರಿ ಟೈಮ್‌ ಸೆಲ್ಫ್ ಡಿಫೆನ್ಸ್‌ ಫೋರ್ಸ್‌ ಮತ್ತು ರಾಯಲ್‌ ಆಸ್ಟ್ರೇಲಿಯನ್‌ ನೌಕಾಪಡೆ ಭಾಗಿಯಾ ಗಿವೆ. ವಿಶಾಖಪಟ್ಟಣಂ ಬಳಿಯಲ್ಲಿ ಈ ಕವಾಯತು ಶುರು ವಾಗಿದೆ.

ಭಾರತದ ಜಲಾಂತರ್ಗಾಮಿ ಸೇರಿದಂತೆ ಐದು ನೌಕೆಗಳು, ಅಮೆರಿಕದ ಜಾನ್‌ ಮೆಕೈನ್‌ ಮಿಸೈಲ್‌ ಡೆಸ್ಟ್ರಾಯರ್‌, ಆಸ್ಟ್ರೇಲಿಯಾದ ಬಲ್ಲಾರತ್‌ ಫ್ರೀಗೇಟ್‌
ಮತ್ತು ಜಪಾನ್‌ನ ನಾಶಕ ನೌಕೆ ಭಾಗಿಯಾಗಿದೆ. ಭಾರತದ ನೌಕೆಗಳ ನೇತೃತ್ವವನ್ನು ರಿಯರ್‌ ಅಡ್ಮಿರಲ್‌ ಸಂಜಯ್‌ ವಾತ್ಸಾಯನ್‌ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ:ಅಮೆರಿಕ ಮಹಾಸಮರ: ಗದ್ದುಗೆ ಯಾರಿಗೆ? ಜೋ ಬೈಡೆನ್, ಟ್ರಂಪ್ ಗೆ ಈವರೆಗೆ ಸಿಕ್ಕ ಮತ ಎಷ್ಟು

Advertisement

ಈ ಬಾರಿಯ ವಿಶೇಷವೆಂದರೆ, ನಾಲ್ಕು ದೇಶಗಳ ಸಮರನೌಕೆಗಳು ಭಾಗಿಯಾಗುತ್ತಿದ್ದರೂ, ಕೊರೊನಾ ಕಾರಣದಿಂದಾಗಿ ಯಾವುದೇ ಯೋಧರು ಪರಸ್ಪರ
ಮುಖಾ ಮುಖಿಯಾಗುತ್ತಿಲ್ಲ. ಮಂಗಳವಾರ ಆರಂಭವಾ ಗಿ ರುವ ಈ ಸಮರಾಭ್ಯಾಸ, ನ.6ರಂದು ಮುಗಿಯಲಿದೆ.

ಇದೇ ತಿಂಗಳ ಮಧ್ಯಭಾಗದಲ್ಲಿ ಎರಡನೇ ಹಂತದ ಮಲಬಾರ್‌ ಸಮರಾಭ್ಯಾಸ ಅರಬ್ಬೀ ಸಮುದ್ರದಲ್ಲಿ ಶುರುವಾಗಲಿದೆ. ಈ ಮಧ್ಯೆ, ನಾಲ್ಕು ದೇಶಗಳ ಮಲಬಾರ್‌ ಸಮರಾಭ್ಯಾಸ ಆರಂಭವಾಗುತ್ತಿದ್ದಂತೆ ನೆರೆಯ ಚೀನಾ ಎಚ್ಚರಿಕೆಯ ಹೇಳಿಕೆ ನೀಡಿದೆ. ಕ್ವಾಡ್‌ ದೇಶಗಳ ಈ ಸಮರಾಭ್ಯಾಸವು ಶಾಂತಿ ಮತ್ತು ಸ್ಥಿರತೆಗೆ ಒತ್ತು ನೀಡಲಿದೆ ಎಂದು ಭಾವಿಸಿದ್ದೇವೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next