ನವದೆಹಲಿ: ಭಾರತದಲ್ಲಿ ಮೊದಲ ಬಾರಿಗೆ ಐತಿಹಾಸಿಕ ಎರಡು ದಿನಗಳ ಜಿ 20 ಶೃಂಗಸಭೆಗೆ ವಿಧ್ಯುಕ್ತವಾಗಿ ಶನಿವಾರ (ಸೆಪ್ಟೆಂಬರ್ 09) ಚಾಲನೆ ದೊರೆಯಲಿದೆ. ಈಗಾಗಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಾಕ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಅನೇಕ ಗಣ್ಯಾತೀಗಣ್ಯರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾರತ್ ಮಂಟಪಕ್ಕೆ ಆಗಮಿಸಿ ವಿಶ್ವದ ನಾಯಕರನ್ನು ಅಭಿನಂದಿಸಿದ್ದಾರೆ.
ಇದನ್ನೂ ಓದಿ:‘Jawan’ box office collection: ರಿಲೀಸ್ ಆದ ಎರಡೇ ದಿನಕ್ಕೆ 200 ಕೋಟಿ ಗಳಿಸಿದ ʼಜವಾನ್ʼ
ಇದೇ ಮೊದಲ ಬಾರಿಗೆ ಜಿ 20 ಒಕ್ಕೂಟದ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ. ಕಳೆದ ಒಂದು ವರ್ಷದಿಂದ ಭಾರತದಲ್ಲಿ ನಡೆದ 200ಕ್ಕೂ ಅಧಿಕ ಸಭೆಗಳ ಸಮಾರೋಪದ ರೀತಿಯಲ್ಲಿ ಶನಿವಾರ ಮತ್ತು ಭಾನುವಾರ ನವದೆಹಲಿಯ ಪ್ರಗತಿ ಮೈದಾನದಲ್ಲಿ 18ನೇ ಜಿ20 ಶೃಂಗಸಭೆ ನಡೆಯಲಿದೆ.
ಜಿ20; ಭಾರತ, ಸೌದಿ, ಅಮೆರಿಕ ನಡುವೆ ರೈಲು, ಬಂದರು ಯೋಜನೆ ಬಗ್ಗೆ ಒಪ್ಪಂದ:
ಭಾರತದ ಮೂಲಕ ಮಧ್ಯ ಏಷ್ಯಾ ಮತ್ತು ಯುರೋಪ್ ಅನ್ನು ಸಂಪರ್ಕಿಸುವ ಪ್ರಮುಖ ರೈಲು ಮತ್ತು ಬಂದರು ಯೋಜನೆಯ ಅಭಿವೃದ್ಧಿಗಾಗಿ ಅಮೆರಿಕ, ಸೌದಿ ಅರೇಬಿಯಾ ಮತ್ತು ಅಮೆರಿಕ ಮಹತ್ವದ ಒಪ್ಪಂದಕ್ಕೆ ಸಹಿಹಾಕಿರುವುದಾಗಿ ಅಮೆರಿಕದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅಮೆರಿಕದ ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರ ಜಾನ್ ಫಿನೆರ್, ಉಭಯ ದೇಶಗಳ ನಡುವೆ ವಾಣಿಜ್ಯ, ಇಂಧನ ವಹಿವಾಟು ಹೆಚ್ಚಳಗೊಳಿಸುವ ಜತೆಗೆ ಹಡಗು ಮತ್ತು ರೈಲು ಸಾರಿಗೆ ಯೋಜನೆಯನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ MoU (ಮೆಮರಾಂಡಮ್ ಆಫ್ ಅಂಡರ್ ಸ್ಟ್ಯಾಂಡಿಂಗ್)ಗೆ ಸಹಿ ಹಾಕಲಾಗಿದೆ ಎಂದು ಹೇಳಿದರು.
ಅದೇ ರೀತಿ ಈ ಮಹತ್ವದ ಯೋಜನೆಯಲ್ಲಿ ಪಾಲುದಾರರಾಗಿರುವ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೂರೋಪಿಯನ್ ಯೂನಿಯನ್ ಸೇರಿದಂತೆ ಸೌದಿ ಅರೇಬಿಯಾ ಹಾಗೂ ಭಾರತದ ನಡುವೆ ಒಪ್ಪಂದ ಆಗಿರುವುದಾಗಿ ಫಿನೆರ್ ತಿಳಿಸಿದ್ದಾರೆ.