Advertisement

FTA ತ್ವರಿತಕ್ಕೆ ಭಾರತ-ಯುಕೆ ತೀರ್ಮಾನ

11:44 PM Sep 09, 2023 | Pranav MS |

ಹೊಸದಿಲ್ಲಿ/ಲಂಡನ್‌: ಭಾರತ ಮತ್ತು ಬ್ರಿಟನ್‌ ನಡುವೆ ಜಾರಿಗೊಳಿಸಲು ಉದ್ದೇಶಿಸಲಾಗಿರುವ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) ಜಾರಿಗೊಳಿಸುವ ಬಗ್ಗೆ ಸಹಮತ ವ್ಯಕ್ತಪಡಿಸಲಾಗಿದೆ. ಹೊಸದಿಲ್ಲಿಯಲ್ಲಿ ನಡೆಯುತ್ತಿ ರುವ ಜಿ20 ರಾಷ್ಟ್ರಗಳ ಸಮ್ಮೇಳನದ ನಡುವೆಯೇ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ವಾಣಿಜ್ಯ ಒಪ್ಪಂದ ಜಾರಿ ಮಾಡುವುದರ ಬಗ್ಗೆ ಪ್ರಸ್ತಾಪವಾಗಿದೆ.

Advertisement

ಮಾತುಕತೆಯ ಬಗ್ಗೆ ಲಂಡನ್‌ನಲ್ಲಿ ಬ್ರಿಟನ್‌ ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ರಕ್ಷಣಾ ತಂತ್ರಜ್ಞಾನ, ಸ್ಟಾರ್ಟ್‌ಅಪ್‌, ದೂತಾವಾಸ ಮತ್ತು ರಾಯಭಾರಕ ಕಚೇರಿಗಳಲ್ಲಿನ ವಿಚಾರಗಳನ್ನು ಇತ್ಯರ್ಥ ಮಾಡುವ ಬಗ್ಗೆ ಸಹಮತ ಹೊಂದಲಾಗಿದೆ ಎಂದು ತಿಳಿಸಲಾಗಿದೆ.

ಎರಡು ದೇಶಗಳ ಜನರ ನಡುವೆ ನಿಕಟ ಬಾಂಧವ್ಯ ಇದೆ. ಈ ನಿಟ್ಟಿನಲ್ಲಿ ವ್ಯಾಪಾರ, ವಾಣಿಜ್ಯ ಮತ್ತು ಬಂಡವಾಳ ಹೂಡುವ ವಿಚಾರದಲ್ಲಿ ಇಬ್ಬರು ನಾಯಕರು ಚರ್ಚೆ ನಡೆಸಿದ್ದಾರೆ ಎಂದು ಲಂಡನ್‌ನಲ್ಲಿ ಬಿಡುಗಡೆ ಮಾಡಲಾಗಿರುವ ಹೇಳಿಕೆಯಲ್ಲಿ ಉಲ್ಲೇಖೀಸಲಾಗಿದೆ.

ದಿಲ್ಲಿಯ ರಸ್ತೆಗಳಲ್ಲಿ ನಡೆದಾಡಿದ ಬ್ರಿಟನ್‌ ಪ್ರಧಾನಿ
ಶುಕ್ರವಾರ ತಡರಾತ್ರಿ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಮತ್ತು ಅವರ ಪತ್ನಿ ಅಕ್ಷತಾಮೂರ್ತಿ ಅವರು ಕೇಂದ್ರ ದೆಹಲಿಯ ಆಯ್ದ ಪ್ರದೇಶಗಳಲ್ಲಿ ಓಡಾಡಿದ್ದಾರೆ. ಅವರು ಅಲ್ಲಿ ಇರುವ ಇಂಪೀರಿಯಲ್‌ ಹೋಟೆಲ್‌ನಲ್ಲಿ ರಾತ್ರಿಯ ಊಟವನ್ನೂ ಸವಿದಿದ್ದಾರೆ. ಇದಲ್ಲದೆ ಹೊಸದಿಲ್ಲಿಯಲ್ಲಿರುವ ಬ್ರಿಟನ್‌ ರಾಯಭಾರ ಕಚೇರಿಗೆ ತೆರಳಿ ಅಲ್ಲಿ ವಿದ್ಯಾರ್ಥಿಗಳ ಜತೆಗೆ ಮುಕ್ತವಾಗಿ ಮಾತುಕತೆ ನಡೆಸಿದರು. ಭಾನುವಾರ ಸುನಕ್‌ ಮತ್ತು ಅವರ ಪತ್ನಿ ಅಕ್ಷತಾ ಅವರು ರಾಷ್ಟ್ರ ರಾಜಧಾನಿ ಯಲ್ಲಿರುವ ಅಕ್ಷರಧಾಮ ದೇಗುಲಕ್ಕೂ ಭೇಟಿ ನೀಡಲಿದ್ದಾರೆ. ಭಾರತಕ್ಕೆ ಭೇಟಿ ನೀಡಿದ ವೇಳೆ “ಎಎನ್‌ಐ’ಗೆ ನೀಡಿದ್ದ ಸಂದರ್ಶನದಲ್ಲಿ ಬ್ರಿಟನ್‌ ಪ್ರಧಾನಿ ದೇಗುಲಗಳಿಗೆ ಭೇಟಿ ನೀಡಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next