Advertisement

ತ್ರಿವರ್ಣಮಯಗೊಂಡಿತು ವಿಶ್ವವಿಖ್ಯಾತ ಬುರ್ಜ್ ಖಲೀಫಾ

09:56 AM Aug 18, 2019 | Team Udayavani |

ದುಬಾಯಿ: ಭಾರತದ ಸ್ವಾತಂತ್ರ್ಯದಿನಾಚರಣೆಯ ಮರುದಿನ ಅಂದರೆ ಆಗಸ್ಟ್ 16ರಂದು ರಾತ್ರಿ 8.44ರ ಸುಮಾರಿಗೆ ದುಬಾಯಿಯಲ್ಲಿರುವ ವಿಶ್ವವಿಖ್ಯಾತ ಬುರ್ಜ್ ಖಲೀಫಾ ಕಟ್ಟಡವು ತ್ರಿವರ್ಣಮಯಗೊಂಡಿತು.

Advertisement

ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಪೂರಕವಾಗಿ ವಿಶ್ವದ ಅತೀ ಎತ್ತರದ ಕಟ್ಟವೆಂದೇ ಖ್ಯಾತಿ ಪಡೆದಿರುವ ಬುರ್ಜ್ ಖಲೀಫಾದಲ್ಲಿ ಭಾರತದ ಧ್ವಜದಲ್ಲಿರುವ ಮೂರು ಬಣ್ಣಗಳು ಮತ್ತು ಹೆಮ್ಮೆಯ ಅಶೋಕ ಚಕ್ರದ ಪ್ರತಿಕೃತಿ ಆಕರ್ಷಕ ಬೆಳಕಿನ ಚಿತ್ತಾರದೊಂದಿಗೆ ಝಗಮಗಿಸಿತು.


ಇದೇ ಸಂದರ್ಭದಲ್ಲಿ ಪಾಕಿಸ್ಥಾನದ ಧ್ವಜವನ್ನೂ ಸಹ ಕಟ್ಟಡದಲ್ಲಿ ಪಡಿಮೂಡಿಸಲಾಯಿತು. ಪಾಕಿಸ್ಥಾನದಲ್ಲಿ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನಾಚರಣೆ ನಡೆದರೆ ಭಾರತದಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯ ಸಂಭ್ರಮವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next