ಹೊಸದಿಲ್ಲಿ: ನ್ಯೂಜಿಲ್ಯಾಂಡ್ ಪ್ರವಾಸಕ್ಕಾಗಿ ಮುನೀಷ್ ಬಾಲಿ ಅವರನ್ನು ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಆಗಿ ನೇಮಿಸಲಾಗಿದೆ.
ಈಗಾಗಲೇ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ವಿಶ್ರಾಂತಿ ನೀಡಿ ಈ ಹುದ್ದೆಗೆ ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಆಯ್ಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಸಹಾಯಕ ತರಬೇತುದಾರರನ್ನೂ ಬದಲಾಯಿಸಲಾಯಿತು. ಹೃಷಿಕೇಶ್ ಕಾನಿಟ್ಕರ್ ಬ್ಯಾಟಿಂಗ್ ಕೋಚ್, ಸಾಯಿರಾಜ್ ಬಹುತುಳೆ ಬೌಲಿಂಗ್ ಕೋಚ್ ಆಗಿ ನೇಮಿಸಲ್ಪಟ್ಟರು. ಇದೀಗ ಫೀಲ್ಡಿಂಗ್ ಕೋಚ್ ಸರದಿ. ಈ ಮೂವರೂ ಎನ್‌ಸಿಎ ಸದಸ್ಯರಾಗಿದ್ದಾರೆ.
ಮುನೀಷ್ ಬಾಲಿ ಇದಕ್ಕೂ ಮೊದಲು ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದ ವೇಳೆ ಭಾರತ ತಂಡದೊಂದಿಗೆ ಇದ್ದರು.