Advertisement

ಆಸೀಸ್‌ ಪ್ರವಾಸ ಮುಗಿದ ಬೆನ್ನಲ್ಲೇ ಭಾರತ-ನ್ಯೂಜಿಲ್ಯಾಂಡ್‌ ಸರಣಿ

06:00 AM Dec 23, 2018 | |

ವೆಲ್ಲಿಂಗ್ಟನ್‌: ಆಸ್ಟ್ರೇಲಿಯ ಪ್ರವಾಸ ಮುಗಿದೊಡನೆ ಭಾರತ ತಂಡ ನೇರವಾಗಿ ತವರಿಗೆ ಮರಳುತ್ತದೆ ಎಂಬ ನಿರೀಕ್ಷೆ ತಲೆಕೆಳಗಾಗಿದೆ. ಕಾಂಗರೂ ನಾಡಿನಿಂದ ಟೀಮ್‌ ಇಂಡಿಯಾ ನ್ಯೂಜಿಲ್ಯಾಂಡಿಗೆ ಪ್ರವಾಸ ಕೈಗೊಳ್ಳುವ ಕಾರ್ಯಕ್ರಮವೊಂದು ಫಿಕ್ಸ್‌ ಆಗಿದೆ.

Advertisement

ಜ. 23ರಿಂದ ಫೆ. 10ರ ತನಕ ನಡೆಯಲಿರುವ ಈ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, 5 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಾಗುವುದು. ಆದರೆ ಈ ಸರಣಿಯಲ್ಲಿ ಟೆಸ್ಟ್‌ ಪಂದ್ಯಗಳನ್ನು ಕೈಬಿಡಲಾಗಿದೆ.

2019 “ವಿಶ್ವಕಪ್‌ ವರ್ಷ’ವಾದ್ದರಿಂದ ಸೀಮಿತ ಓವರ್‌ಗಳ ಪಂದ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತೀರ್ಮಾನಿಸಬಹುದು. ಇದರೊಂದಿಗೆ ವಿರಾಟ್‌ ಕೊಹ್ಲಿ ಮೊದಲ ಬಾರಿಗೆ ನಾಯಕನಾಗಿ ನ್ಯೂಜಿಲ್ಯಾಂಡ್‌ ಪ್ರವಾಸ ಕೈಗೊಂಡಂತಾಗುತ್ತದೆ. ಕಳೆದ ಸಲ ಭಾರತ ತಂಡದ ನ್ಯೂಜಿಲ್ಯಾಂಡ್‌ ಪ್ರವಾಸದ ವೇಳೆ ಧೋನಿ ಕಪ್ತಾನನಾಗಿದ್ದರು.

ಸದ್ಯ ಭಾರತ ತಂಡ ಆಸ್ಟ್ರೇಲಿಯದಲ್ಲಿ ಟೆಸ್ಟ್‌ ಸರಣಿ ಆಡುತ್ತಿದೆ. ಇದು ಜ. 7ಕ್ಕೆ ಮುಗಿಯುತ್ತದೆ. ಬಳಿಕ 3 ಏಕದಿನ ಹಾಗೂ ಏಕೈಕ ಟಿ20 ಪಂದ್ಯ ನಡೆಯಲಿದೆ. ಭಾರತ ತನ್ನ ಆಸ್ಟ್ರೇಲಿಯ ಪ್ರವಾಸವನ್ನು ಮುಗಿಸಿದ ಐದೇ ದಿನಗಳಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ನೇಪಿಯರ್‌ನಲ್ಲಿ ಮೊದಲ ಏಕದಿನ ಪಂದ್ಯವಾಡಲಿದೆ.

ಏಕದಿನ ಹಾಗೂ ಟಿ20 ಪಂದ್ಯಗಳೆಲ್ಲವೂ ಹಗಲು-ರಾತ್ರಿ ನಡೆಯಲಿದ್ದು, ಭಾರತೀಯ ಕಾಲಮಾನದಂತೆ ಬೆಳಗ್ಗೆ 7.30, 11.30 ಹಾಗೂ ಅಪರಾಹ್ನ 12.30ಕ್ಕೆ ಆರಂಭವಾಗಲಿವೆ. ಸ್ಟಾರ್‌ ನ್ಪೋರ್ಟ್ಸ್ನಲ್ಲಿ ನೇರ ಪ್ರಸಾರ ಕಾಣಲಿದೆ.

Advertisement

ಭಾರತ-ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಸರಣಿ ವೇಳಾಪಟ್ಟಿ
ದಿನಾಂಕ    ಪಂದ್ಯ    ಸ್ಥಳ    ಆರಂಭ

ಜ. 23    1ನೇ ಏಕದಿನ    ನೇಪಿಯರ್‌    ಬೆಳಗ್ಗೆ 7.30
ಜ. 26    2ನೇ ಏಕದಿನ    ಮೌಂಟ್‌ ಮೌಂಗನುಯಿ    ಬೆಳಗ್ಗೆ 7.30
ಜ. 28    3ನೇ ಏಕದಿನ    ಮೌಂಟ್‌ ಮೌಂಗನುಯಿ    ಬೆಳಗ್ಗೆ 7.30
ಜ. 31    4ನೇ ಏಕದಿನ    ಹ್ಯಾಮಿಲ್ಟನ್‌    ಬೆಳಗ್ಗೆ 7.30
ಫೆ. 3    5ನೇ ಏಕದಿನ    ವೆಲ್ಲಿಂಗ್ಟನ್‌    ಬೆಳಗ್ಗೆ 7.30
ಫೆ. 6    1ನೇ ಟಿ20    ವೆಲ್ಲಿಂಗ್ಟನ್‌    ಅ. 12.30
ಫೆ. 8    2ನೇ ಟಿ20    ಆಕ್ಲೆಂಡ್‌    ಬೆಳಗ್ಗೆ 11.30
ಫೆ. 10    3ನೇ ಟಿ20    ಹ್ಯಾಮಿಲ್ಟನ್‌    ಅ. 12.30

Advertisement

Udayavani is now on Telegram. Click here to join our channel and stay updated with the latest news.

Next