Advertisement

ಸರಕಾರದ ಎಚ್ಚರಿಕೆಯ ನಡುವೆಯೂ ಭಾರತದಲ್ಲಿ ಝೂಮ್ ಆ್ಯಪ್ ಭರ್ಜರಿ ಡೌನ್ಲೋಡ್

08:33 AM May 12, 2020 | Hari Prasad |

ನವದೆಹಲಿ: ಕೋವಿಡ್ ಸಂಬಂಧಿತ ಈ ಲಾಕ್ ಡೌನ್ ಅವಧಿಯಲ್ಲಿ ಕಛೇರಿ ಕಾನ್ಫೆರೆನ್ಸ್ ನಡೆಸಲು ಅನುಕೂಲವಾಗುವ ಫೀಚರ್ ಗಳನ್ನು ಹೊಂದಿರುವ ಝೂಮ್ ಆ್ಯಪ್ ಗೆ ಉತ್ತಮ ಡಿಮ್ಯಾಂಡ್ ಇದೆ.

Advertisement

ಆದರೆ ಕೇಂದ್ರ ಸರಕಾರವು ಈ ಆ್ಯಪ್ ನ ಸುರಕ್ಷತಾ ವಿಚಾರಗಳಿಗೆ ಸಂಬಂಧಿಸಿದಂತೆ ಕೆಲವೊಂದು ಎಚ್ಚರಿಕೆಗಳನ್ನು ಈ ಹಿಂದೆಯೇ ನೀಡಿತ್ತು.

ಆದರೂ ಭಾರತದಲ್ಲಿ ಲಾಕ್ ಡೌನ್ ಪ್ರಾರಂಭವಾದ ಬಳಿಕ ಝೂಮ್ ಆ್ಯಪ್ ಭರ್ಜರಿ ಡೌನ್ ಲೋಡ್ ಗಳನ್ನು ಕಂಡಿದೆ ಎಂದು ಆ್ಯಪ್ ಇಂಟಲಿಜೆನ್ಸ್ ಸಂಸ್ಥೆ ಸೆನ್ಸಾರ್ ಟವರ್ ಮಾಹಿತಿ ನೀಡಿದೆ.

ಸೆನ್ಸಾರ್ ಟವರ್ ನ ಮಾಹಿತಿಯಂತೆ ಏಪ್ರಿಲ್ ತಿಂಗಳಿನಲ್ಲಿ ಈ ಝೂಮ್ ಆ್ಯಪ್ ವಿಶ್ವಾದ್ಯಂತ 131 ಮಿಲಿಯನ್ ಡೌನ್ಲೋಡ್ ಗಳನ್ನು ಕಂಡಿದೆ ಮತ್ತು ಇದರಲ್ಲಿ ಭಾರತದ ಪಾಲು 18.2 ಪ್ರತಿಶತವಾಗಿದೆ. ಅಮೆರಿಕಾದ ಬಳಿಕ ಭಾರತದಲ್ಲೇ ಈ ಆ್ಯಪ್ ಅತ್ಯಧಿಕ ಡೌನ್ ಲೋಡ್ ಗೊಳಗಾಗಿರುವುದು ಅಚ್ಚರಿಯ ವಿಷಯವಾಗಿದೆ.

ಇನ್ನು ಝೂಂ ಆ್ಯಪ್ ಬಳಿಕ ಈ ಲಾಕ್ ಡೌನ್ ಅವಧಿಯಲ್ಲಿ ಅತೀ ಹೆಚ್ಚು ಡೌನ್ ಲೋಡ್ ಗೊಳಗಾಗಿರುವ ಆ್ಯಪ್ ಟಿಕ್ ಟಾಕ್ ಆಗಿದೆ. ಟಿಕ್ ಟಾಕ್ ಸಹ ಏಪ್ರಿಲ್ ತಿಂಗಳಿನಲ್ಲಿ ಭರ್ಜರಿ ಬೆಳವಣಿಗೆ ಕಂಡಿದ್ದು ವಿಶ್ವಾದ್ಯಂತ ಈ ಆ್ಯಪ್ 107 ಮಿಲಿಯನ್ ಡೌನ್ ಲೋಡ್ ಗಳನ್ನು ಕಂಡಿದೆ, ಇದರಲ್ಲಿ ನಮ್ಮ ದೇಶದ ಪಾಲೆಷ್ಟು ಗೊತ್ತಾ?, 22 ಪ್ರತಿಶತ!

Advertisement

ಲಾಕ್ ಡೌನ್ ನಿಯಮಗಳ ಪಾಲನೆ ಮತ್ತು ಸಾಮಾಜಿಕ ಅಂತರ ಸಾಧಿಸುವಿಕೆಗಾಗಿ ಹಲವಾರು ಕಂಪೆನಿಗಳು ಇದೀಗ ಮುಖಾಮುಖಿ ಮೀಟಿಂಗ್ ಹಾಗೂ ಕಾನ್ಫೆರೆನ್ಸ್ ಗಳಿಗೆ ಬಹುತೇಕ ಗುಡ್ ಬೈ ಹೇಳಿವೆ. ಈ ಸ್ಥಾನವನ್ನು ಸದ್ಯಕ್ಕೆ ಝೂಂ ಆ್ಯಪ್ ಮತ್ತು ಗೂಗಲ್ ಮೀಟ್ ಗಳು ತುಂಬುತ್ತಿವೆ.

ಕೇವಲ ಕಂಪೆನಿಗಳು ಮಾತ್ರವಲ್ಲದೇ ಇದೀಗ ಶಾಲಾ ಕಾಲೇಜುಗಳೂ ಸಹ ಆನ್ ಲೈನ್ ತರಗತಿಗಳ ಮೊರೆ ಹೋಗುತ್ತಿರುವುದರಿಂದ ಈ ಆ್ಯಪ್ ಗಳಿಗೆ ಬೇಡಿಕೆ ಹೆಚ್ಚಾಗತೊಡಗಿದೆ.

ಝೂಂ ಮತ್ತು ಟಿಕ್ ಟಾಕ್ ಆ್ಯಪ್ ಗಳು ಡೌನ್ ಲೋಡ್ ವಿಚಾರದಲ್ಲಿ ಜಾಗತಿಕವಾಗಿ ಕ್ರಮವಾಗಿ ಒಂದು ಹಾಗೂ ಎರಡನೇ ಸ್ಥಾನದಲ್ಲಿದ್ದರೆ ಮತ್ತೆ ಯಥಾಪ್ರಕಾರವಾಗಿ ಫೇಸ್ಬುಕ್, ವಾಟ್ಸ್ಯಾಪ್, ಇನ್ ಸ್ಟಾಗ್ರಾಂ, ಮೆಸೆಂಜರ್ ಆ ಬಳಿಕದ ಸ್ಥಾನದಲ್ಲಿದ್ದರೆ ಕೇಂದ್ರ ಸರಕಾರದ ಆರೋಗ್ಯ ಸೇತು ಆ್ಯಪ್ ಏಳನೇ ಸ್ಥಾನವನ್ನು ಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next