ಮುಂಬೈ: ಮೂರನೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಋತುವನ್ನು ಭಾರತ ತಂಡ ಶುಭಾರಂಭಗೊಳಿಸಿದೆ. ವೆಸ್ಟ್ ಇಂಡೀಸ್ ವಿರುದ್ದದ ಸರಣಿಯೊಂದಿಗೆ ಋತುವನ್ನು ಆರಂಭಿಸಿದ ಭಾರತ ಮೊದಲ ಪಂದ್ಯವನ್ನು ಗೆದ್ದು ಬೀಗಿದೆ. ಡೊಮಿನಿಕಾದ ರೊಸಾಯೊದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ರೋಹಿತ್ ಶರ್ಮಾ ಬಳಗವು ಇನ್ನಿಂಗ್ಸ್ ಮತ್ತು 141 ರನ್ ಅಂತರದಿಂದ ಗೆದ್ದುಕೊಂಡಿದೆ.
ಈ ಪಂದ್ಯದ ಗೆಲುವಿನೊಂದಿಗೆ ಡಬ್ಲ್ಯೂಟಿಸಿ ಸೈಕಲ್ ನ ಮೊದಲ ಅಂಕವನ್ನು ಸಂಪಾದಿಸಿಕೊಂಡಿದೆ. ವೆಸ್ಟ್ ಇಂಡೀಸ್ ವಿರುದ್ಧ ಭಾರತ ಗೆದ್ದ ನಂತರ ಐಸಿಸಿ ಡಬ್ಲ್ಯೂಟಿಸಿ 2023 ಪಾಯಿಂಟ್ಸ್ ಟೇಬಲ್ ನವೀಕರಿಸಿದೆ.
ರೋಹಿತ್ ಬಳಗವು ಈ ಗೆಲುವಿನೊಂದಿಗೆ ಡಬ್ಲ್ಯೂಟಿಸಿ 2023 ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರ ಸ್ಥಾನಕ್ಕೆ ಜಿಗಿದಿದ್ದು, 12 ಅಂಕ ಕಲೆಹಾಕಿದೆ. ಟೀಂ ಇಂಡಿಯಾ ಗೆಲುವಿನ ಶೇಕಡಾವಾರು 100 ಪ್ರತಿಶತ. ಆಸ್ಟ್ರೇಲಿಯ ಮೂರು ಪಂದ್ಯಗಳಿಂದ 22 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ತಂಡವಾಗಿದೆ. ಅದು ಎರಡು ಗೆದ್ದು ಒಂದು ಪಂದ್ಯ ಸೋತಿದೆ. ಪ್ರಸ್ತುತ ಆಸ್ಟ್ರೇಲಿಯಾದ ಶೇಕಡಾವಾರು 61.11. ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್, ಈ ಚಕ್ರದಲ್ಲಿ ಇದುವರೆಗೆ ಕೇವಲ ಒಂದು ಟೆಸ್ಟ್ ಗೆದ್ದು ಆ ಪಂದ್ಯದಿಂದ 10 ಅಂಕಗಳನ್ನು ಹೊಂದಿದೆ. ಅವರ ಗೆಲುವಿನ ಶೇಕಡಾವಾರು 27.78 ಆಗಿದೆ.
ಇದನ್ನೂ ಓದಿ:NDA ಸಭೆಗೆ ಬನ್ನಿ; ಚಿರಾಗ್ ಪಾಸ್ವಾನ್ ರಿಗೆ ಪತ್ರ ಬರೆದ ನಡ್ಡಾ
ಉಳಿದ ಯಾವುದೇ ತಂಡಗಳು ಈ ಋತುವಿನಲ್ಲಿ ಇನ್ನೂ ಟೆಸ್ಟ್ ಪಂದ್ಯವಾಡಿಲ್ಲ. ಎರಡು ವರ್ಷಗಳ ಋತುವಿನಲ್ಲಿ ಅಂತ್ಯದಲ್ಲಿ ಅಗ್ರ ಸ್ಥಾನ ಪಡೆಯುವ ಎರಡು ತಂಡಗಳು ಫೈನಲ್ ಆಡಲಿದೆ.
ಭಾರತ ತಂಡವು ಕಳೆದೆರಡು ಸೀಸನ್ ನಲ್ಲೂ ಫೈನಲ್ ತಲುಪಿತ್ತು. ಆದರೆ ಎರಡು ಬಾರಿಯೂ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಮೊದಲ ಬಾರಿ ನ್ಯೂಜಿಲ್ಯಾಂಡ್ ವಿರುದ್ದ ನಂತರ ಆಸ್ಟ್ರೇಲಿಯಾ ವಿರುದ್ಧ ಫೈನಲ್ ಸೋತಿದೆ.