Advertisement

ಟಾಪ್‌ 5ರಲ್ಲಿ ಭಾರತ

01:52 AM Jan 22, 2019 | |

ಹೊಸದಿಲ್ಲಿ: ವಿಶ್ವದಲ್ಲಿ ಅತಿ ಹೆಚ್ಚು ನೈಜ ಬಡ್ಡಿ ದರ ಇರುವ ಟಾಪ್‌ 5 ರಾಷ್ಟ್ರಗಳ ಸಾಲಿಗೆ ದಕ್ಷಿಣ ಏಷ್ಯಾದ ರಾಷ್ಟ್ರಗಳಾದ ಭಾರತ, ಪಾಕಿಸ್ಥಾನ ಮತ್ತು ಶ್ರೀಲಂಕಾ ಸೇರ್ಪಡೆಗೊಂಡಿವೆ. ವಾರ್ಷಿಕ ಶೇ. 6.2ರಷ್ಟು ನೈಜ ಬಡ್ಡಿ ದರ ಹೊಂದಿರುವ ಶ್ರೀಲಂಕಾ ಮೊದಲ ಸ್ಥಾನದಲ್ಲಿದ್ದರೆ, ಅನಂತರದ ಸ್ಥಾನಗಳಲ್ಲಿ ಈಜಿಪ್ಟ್ (ಶೇ. 4.8), ಪಾಕಿಸ್ಥಾನ (ಶೇ. 4.3), ಭಾರತ (ಶೇ. 4.3) ಮತ್ತು ಟರ್ಕಿ (ಶೇ. 3.7) ದೇಶಗಳಿವೆ. ಭಾರತದಲ್ಲಿ ನೈಜ ಬಡ್ಡಿದರ ಹೆಚ್ಚಾಗಿರುವುದನ್ನು ಈಗಾಗಲೇ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಗಂಭೀರವಾಗಿ ಪರಿಗಣಿಸಿದ್ದಾರೆ. ಹಾಗಾಗಿ, ಭಾರತೀಯ ರಿಸರ್ವ್‌ ಬ್ಯಾಂಕ್‌ ವತಿಯಿಂದ ಮುಂದಿನ ತಿಂಗಳು ಬಡ್ಡಿ ಕಡಿತದ ಹೊಸ ಆದೇಶ ಹೊರಬೀಳುವ ನಿರೀಕ್ಷೆಯಿದೆ ಎಂದು ಭಾರತದ ಆರ್ಥಿಕ ತಜ್ಞರು ನಿರೀಕ್ಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next