Advertisement

ಯಾವ ಪಕ್ಷಕ್ಕೂ ಬಹುಮತ ಸಿಗದು: ಇಂಡಿಯಾ ಟುಡೆ-ಕಾರ್ವಿ ಸಮೀಕ್ಷೆ

06:43 PM Apr 13, 2018 | Team Udayavani |

ಹೊಸದಿಲ್ಲಿ : ಇಂಡಿಯಾ ಟುಡೆ ಮತ್ತು ಕಾರ್ವಿ ಇನ್‌ಸೈಟ್ಸ್‌ ಜತೆಗೂಡಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ  ತ್ರಿಶಂಕು ಸ್ಥಿತಿ ತಲೆದೋರಲಿದೆ. 

Advertisement

225 ಸದಸ್ಯ ಬಲದ ಕರ್ನಾಟಕ ವಿಧಾನ ಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು ಸರಳ ಬಹುಮತಕ್ಕಾಗಿ ಯಾವುದೇ ಒಂದು ಪಕ್ಷ 112 ಸ್ಥಾನಗಳನ್ನು ಗೆಲ್ಲಬೇಕಿದೆ.

ಇಂಡಿಯಾ ಟುಡೆ – ಕಾರ್ವಿ ಸಮೀಕ್ಷೆಯ ಪ್ರಕಾರ ಆಳುವ ಕಾಂಗ್ರೆಸ್‌ ಪಕ್ಷಕ್ಕೆ 90 ರಿಂದ 101 ಸ್ಥಾನಗಳು ಸಿಗಲಿವೆ. 

ಭಾರತೀಯ ಜನತಾ ಪಕ್ಷಕ್ಕೆ 78ರಿಂದ 86 ಸ್ಥಾನಗಳು ಸಿಗಲಿವೆ.

ಕಿಂಗ್‌ ಮೇಕರ್‌ ಆಗಲಿರುವ ಎಚ್‌ ಡಿ ದೇವೇಗೌಡ ಅವರ ಜೆಡಿಎಸ್‌ ಪಕ್ಷಕ್ಕೆ 34ರಿಂದ 43 ಸ್ಥಾನಗಳು ಪ್ರಾಪ್ತವಾಗಲಿವೆ ಎಂದು ಸಮೀಕ್ಷೆ ತಿಳಿಸಿದೆ. 

Advertisement

ಮತ ಹಂಚಿಕೆ ಪ್ರಕಾರ ಹೇಳುವುದಾದರೆ ಕಾಂಗ್ರೆಸ್‌ ಶೇ.37 ಮತಗಳನ್ನು ಗಳಿಸಲಿದೆ. ಬಿಜೆಪಿಗೆ ಶೇ.35 ಮತಗಳು ದಕ್ಕಲಿವೆ. ಜೆಡಿಎಸ್‌-ಬಿಎಸ್‌ಪಿ ಗೆ ಒಟ್ಟಾರೆಯಾಗಿ ಶೇ.19 ಮತಗಳು ಪ್ರಾಪ್ತವಾಗಲಿವೆ. 

ತ್ರಿಶಂಕು ಸ್ಥಿತಿ ಏರ್ಪಟ್ಟಲ್ಲಿ  ಅತ್ಯಂತ ಹಳೆಯ ಕಾಂಗ್ರೆಸ್‌ ಪಕ್ಷಕ್ಕೆ ಜೆಡಿಎಸ್‌ ಬೆಂಬಲ ಕೊಡಬೇಕು ಎಂದು ಶೇ.39 ಜನರು ಬಯಸುತ್ತಾರೆ; ಬಿಜೆಪಿಗೆ ಜೆಡಿಎಸ್‌ ಬೆಂಬಲ ಕೊಡಬೇಕು ಎಂದು ಶೇ.29 ಮಂದಿ ಬಯಸುತ್ತಾರೆ ಎನ್ನುವುದು ಸಮೀಕ್ಷೆಯಲ್ಲಿ ಗೊತ್ತಾಗಿದೆ. 

ಈ ಚುನಾವಣಾ ಪೂರ್ವ ಸಮೀಕ್ಷೆಗಾಗಿ ಇಂಡಿಯಾ ಟುಡೆ ಮತ್ತು ಕಾರ್ವಿ ಇನ್‌ಸೈಟ್ಸ್‌  ರಾಜ್ಯಾದ್ಯಂತದ 224 ವಿಧಾನಸಭಾ ಕ್ಷೇತ್ರಗಳ 27,919 ಮಂದಿಯನ್ನು ಸಂದರ್ಶಿಸಿದೆ. 

ಕರ್ನಾಟಕ ವಿಧಾನಸಭೆಗೆ ಮೇ 12ರಂದು ಮತದಾನ ನಡೆಯಲಿದ್ದು ಮೇ 15ರಂದು ಫ‌ಲಿತಾಂಶ ಹೊರಬೀಳಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next