Advertisement

ಮತ್ತೂಂದು ದೊಡ್ಡ  ಗೆಲುವಿಗೆ ಭಾರತ ಹೊಂಚು

05:35 PM Oct 13, 2017 | Team Udayavani |

ಢಾಕಾ: ಏಶ್ಯ ಕಪ್‌ ಹಾಕಿ ಪಂದ್ಯಾವಳಿಯಲ್ಲಿ ಜಪಾನನ್ನು 5-1 ಗೋಲುಗಳಿಂದ ಮಣಿಸಿ ಭರ್ಜರಿ ಆರಂಭ ಮಾಡಿರುವ ಭಾರತ, ಶುಕ್ರವಾರದ ಹಣಾಹಣಿಯಲ್ಲಿ ಮತ್ತೂಂದು ದೊಡ್ಡ ಗೆಲುವಿಗೆ ಹೊಂಚು ಹಾಕಿದೆ. ಎದುರಾಳಿ ತಂಡ ಬೇರೆ ಯಾವುದೂ ಅಲ್ಲ, ಕೂಟದ ದುರ್ಬಲ ತಂಡವಾಗಿರುವ ಬಾಂಗ್ಲಾದೇಶ.

Advertisement

ಗುರುವಾರದ ಆರಂಭಿಕ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ 0-7 ಅಂತರದಿಂದ ಪಾಕಿಸ್ಥಾನಕ್ಕೆ ಶರಣಾಗಿತ್ತು. ಭಾರತ ಕೂಡ ಭಾರೀ ಅಂತರದಲ್ಲಿ ಬಾಂಗ್ಲಾವನ್ನು ಮಣಿಸುವ ಬಗ್ಗೆ ಅನುಮಾನವಿಲ್ಲ. ಆಗ ಅಂತಿಮ ಲೀಗ್‌ ಪಂದ್ಯದಲ್ಲಿ ಸಾಂಪ್ರದಾಯಕ ಸ್ಪರ್ಧಿಯಾಗಿರುವ ಪಾಕಿಸ್ಥಾನವನ್ನು ಹೆಚ್ಚು ಆತ್ಮವಿಶ್ವಾಸದಿಂದ ಎದುರಿಸಬಹುದು.

ಜಪಾನ್‌ ಎದುರಿನ ಮೊದಲ ಪಂದ್ಯ ಭಾರತದ ನೂತನ ಕೋಚ್‌ ಮರಿನ್‌ ಶೋರ್ಡ್‌ ಪಾಲಿಗೆ ಬಹಳ ಮುಖ್ಯವಾಗಿತ್ತು. ಮನದೀಪ್‌ ಸಿಂಗ್‌ ಪಡೆ ನಿರಾಸೆಗೊಳಿಸಲಿಲ್ಲ. ಜಪಾನ್‌ ನಾಲ್ಕನೇ ನಿಮಿಷದಲ್ಲೇ ಸಮಬಲ ಸಾಧಿಸಿದ್ದು ತಂಡಕ್ಕೆ ಎದುರಾದ ಸಣ್ಣ ಮಟ್ಟದ ಹಿನ್ನಡೆಯಾದರೂ ಬಳಿಕ ಭಾರತ ಅಮೋಘ ಪ್ರಭುತ್ವ ಸಾಧಿಸಿತು. ಕೌಶಲಭರಿತ ಪ್ರದರ್ಶನವೊಂದನ್ನು ನೀಡಿ ಗಮನ ಸೆಳೆಯಿತು. ಬಾಂಗ್ಲಾ ವಿರುದ್ಧ ಈ ಕೌಶಲಕ್ಕೆ ಇನ್ನಷ್ಟು ಹೊಳಪು ನೀಡಬೇಕಿದೆ.

ಎಸ್‌.ವಿ. ಸುನೀಲ್‌, ಲಲಿತ್‌ ಉಪಾಧ್ಯಾಯ, ರಮಣ್‌ದೀಪ್‌ ಸಿಂಗ್‌, ಆಕಾಶ್‌ದೀಪ್‌ ಸಿಂಗ್‌ ಅವರ ಆಕ್ರಮಣ ಅತ್ಯಂತ ಅಪಾಯಕಾರಿ ಮಟ್ಟದಲ್ಲಿತ್ತು. ಭಾರತದ ಈ ಸಾಧನೆಗೆ ಕೋಚ್‌ ಮರಿನ್‌ ಸಂತಸ ವ್ಯಕ್ತಪಡಿಸಿದರೂ ಎಲ್ಲ ತರಬೇತುದಾರರಂತೆ ಇನ್ನೂ ಉತ್ತಮ ಪ್ರದರ್ಶನ ನೀಡಬೇಕೆಂಬ ಅಪೇಕ್ಷೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next