Advertisement

ಇನ್ನು ಭಾರತದಲ್ಲಿ ಬಳಕೆಯಾಗಲಿದೆ ವಿಶ್ವದಲ್ಲೇ ಅತೀ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್

08:41 AM Feb 20, 2020 | Hari Prasad |

ಹೊಸದಿಲ್ಲಿ: ಮುಂದಿನ ಎಪ್ರಿಲ್‌ ತಿಂಗಳ ಬಳಿಕ ದೇಶ ಜಗತ್ತಿನ ಶುದ್ಧ ಪೆಟ್ರೋಲ್‌ ಹಾಗೂ ಡೀಸೆಲ್‌ಗ‌ಳನ್ನು ಹೊಂದಿರಲಿದೆ. ಲೀಪ್‌ಫ್ರಾಗ್‌ ಸ್ಟ್ರೈಟ್‌ ಯೂರೊ-6 ದರ್ಜೆಯ ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟ ಆರಂಭವಾಗಲಿದೆ. ಈ ಶುದ್ಧ ಇಂಧನವು ವಾಯು ಮಾಲಿನ್ಯ ತಡೆಗೆ ಸಹಕಾರಿ ಎನ್ನಲಾಗುತ್ತಿದೆ.

Advertisement

ಯುರೊ-4ರಿಂದ ಯುರೊ-6 ದರ್ಜೆಯ ಶುದ್ಧ ಇಂಧನ ಬಳಕೆಗೆ ದೇಶ ತೆರೆದುಕೊಳ್ಳಲಿದೆ. ವರ್ಷಗಳ ಹಿಂದೆ ರಾಷ್ಟ್ರ ರಾಜಾಧಾನಿ ದಿಲ್ಲಿಯಲ್ಲಿ ಇದನ್ನು ಮೊದಲ ಬಾರಿ ಜಾರಿಗೊಳಿಸಲಾಗಿತ್ತು. ಅಪಾರ ವಾಯುಮಾಲಿನ್ಯದಿಂದ ಬಳಲುತ್ತಿರುವ ದಿಲ್ಲಿಯಲ್ಲಿ ಶುದ್ಧ ಇಂಧನ ಬಳಕೆಗೆ ಸರಕಾರ ಕ್ರಮ ಕೈಗೊಂಡಿತ್ತು.

ಶುದ್ಧ ಇಂಧನ ತಯಾರಿಕೆಗಾಗಿ ತೈಲ ಕಂಪನಿಗಳು ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ಯುರೊ-6 ದರ್ಜೆ ಇಂಧನ ಬಳಕೆಯಿಂದ ಮಾಲಿನ್ಯವು ಶೇ.10ರಿಂದ 20ರಷ್ಟು ತಗ್ಗಲಿದೆ. ಎಪ್ರಿಲ್‌ ತಿಂಗಳಿನಲ್ಲಿ ದೇಶದಲ್ಲಿ ಬಿಎಸ್‌ 6 ವಾಹನಗಳು ಮಾರುಕಟ್ಟೆಗೆ ಬರಲಿವೆ.

Advertisement

Udayavani is now on Telegram. Click here to join our channel and stay updated with the latest news.

Next