Advertisement

ಅಸ್ಟ್ರಾಜೆನೆಕಾ ಅಡ್ಡಪರಿಣಾಮ ಅಧ್ಯಯನ : ಭಾರತದಲ್ಲಿ ಅಡ್ಡಪರಿಣಾಮಗಳು ಕ್ಷೀಣ

01:48 AM Mar 14, 2021 | Team Udayavani |

ಹೊಸದಿಲ್ಲಿ: ಡೆನ್ಮಾರ್ಕ್‌, ನಾರ್ವೆ, ಐಸ್‌ಲ್ಯಾಂಡ್‌, ಥಾಯ್ಲೆಂಡ್‌ಗಳಲ್ಲಿ ನೀಡಲ್ಪಡುತ್ತಿರುವ ಅಸ್ಟ್ರಾಜೆನೆಕಾದ ಕೊರೊನಾ ಲಸಿಕೆ ಪಡೆದುಕೊಂಡ ಬಳಿಕ, ಕೆಲವರಿಗೆ ರಕ್ತ ಹೆಪ್ಪುಗಟ್ಟಿದ ಸಮಸ್ಯೆ ಎದುರಾಗಿದೆ. ಆದ್ದರಿಂದ ಭಾರತದಲ್ಲಿ ಮುಂದಿನ ವಾರದಿಂದ ಈ ಲಸಿಕೆಯ ಅಡ್ಡ ಪರಿಣಾಮಗಳನ್ನು ಆಳವಾಗಿ ಅಧ್ಯ ಯನ ನಡೆಸಲು ನಿರ್ಧರಿಸಲಾಗಿದೆ ಎಂದು ರಾಷ್ಟ್ರೀಯ ಕೊರೊನಾ ಕಾರ್ಯಪಡೆ (ಎನ್‌ಟಿಎಫ್) ತಿಳಿಸಿದೆ.

Advertisement

“ಅಸ್ಟ್ರಾಜೆನೆಕಾದಿಂದ ಉಂಟಾಗಿರುವ ಅಡ್ಡಪರಿ ಣಾಮಗಳನ್ನು ನಾವು ಗಂಭೀರವಾಗಿ ಪರಿಗಣಿಸಿ ದ್ದೇವೆ. ಐರೋಪ್ಯ ರಾಷ್ಟ್ರಗಳಲ್ಲಿ ಈ ಲಸಿಕೆ ಪಡೆದವರಲ್ಲಿ ಕೆಲವರು ಸಾವಿಗೀಡಾಗಿದ್ದಾರೆ. ಇನ್ನೂ ಕೆಲವರು ಗಂಭೀರ ಸ್ಥಿತಿ ತಲುಪಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಲಸಿಕೆಯನ್ನು ಆಳವಾಗಿ ಅಧ್ಯಯನ ನಡೆಸಿ, ಅದರ ಉಪಯೋಗದ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲಾಗುತ್ತದೆ’ ಎಂದು ಎನ್‌ಟಿಎಫ್ನ ಸದಸ್ಯ ಎನ್‌.ಕೆ. ಅರೋರಾ ತಿಳಿಸಿದ್ದಾರೆ.

ಭಾರತದಲ್ಲಿ ಈ ಲಸಿಕೆ ಪಡೆದವರಿಗೆ ಅಡ್ಡಪರಿಣಾ ಮ ಗಳಾಗಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಭಾರತದಲ್ಲಿ ಅಸ್ಟ್ರಾಜೆನೆಕಾದಿಂದ ಅಡ್ಡಪರಿಣಾ ಮಕ್ಕೆ ಒಳಗಾದವರ ಸಂಖ್ಯೆ ತೀರಾ ಕಡಿಮೆ. ಆದರೂ, ಆ ಎಲ್ಲ ಪ್ರಕರಣಗಳನ್ನು ಮರು ಪರಿಶೀಲನೆ ಮಾಡಲಾ ಗುತ್ತದೆ. ಈ ಲಸಿಕೆ ಪಡೆದವರಿಗೆ ರಕ್ತ ಹೆಪ್ಪುಗಟ್ಟುವಂಥ ಪರಿಸ್ಥಿತಿ ಬಂದಿದೆಯೇ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಏರುತ್ತಿರುವ ಕೊರೊನಾ: ಒಂದು ಕಡೆ ಲಸಿಕೆ ಪ್ರಕ್ರಿಯೆ ತೀವ್ರವಾಗಿರುವಂತೆಯೇ; ಇನ್ನೊಂದು ಕಡೆ ಕೊರೊನಾ ಪ್ರಕರಣಗಳು ಏರುತ್ತಿವೆ. ಶನಿವಾರದ ಲೆಕ್ಕಾಚಾರವನ್ನು ಪರಿಗಣಿಸಿದರೆ ಒಟ್ಟು 24 ಗಂಟೆ ಅವಧಿಯಲ್ಲಿ 24,882 ಹೊಸ ಪ್ರಕರಣಗಳು ದಾಖಲಾಗಿವೆ. ಕಳೆದ 83 ದಿನಗಳಲ್ಲೇ ಇದು ಗರಿಷ್ಠ ಏರಿಕೆಯಾಗಿದೆ. ಇದೇ 24 ಗಂಟೆಗಳಲ್ಲಿ 140 ಮಂದಿ ಸಾವನ್ನಪ್ಪಿದ್ದಾರೆ.

ಅಂಗನವಾಡಿ ಬಂದ್‌: ಪಂಜಾಬ್‌ನಲ್ಲಿ ಎಲ್ಲ ಅಂಗನ ವಾಡಿ ಕೇಂದ್ರಗಳನ್ನು ಮುಚ್ಚಲು ಸೂಚಿಸಲಾಗಿದೆ.

Advertisement

ಭೋಪಾಲ್‌ನಲ್ಲಿ ಇಂದು ನೈಟ್‌ ಕರ್ಫ್ಯೂ ಜಾರಿ?
ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ಆ ನಗರದಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾನ್‌ ತಿಳಿಸಿದ್ದಾರೆ. ಕೊರೊನಾ ನಿರ್ಹ ವಣೆ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದ ಅವರು, “ಕೊರೊನಾ ನಿಯಂತ್ರಿಸಲು ಮೊದಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ. ಅಗತ್ಯವಿದ್ದರೆ ರಾತ್ರಿ ಕರ್ಫ್ಯೂವನ್ನು ಹೇರಲಾಗುತ್ತದೆ. ಪ್ರಾಯಶಃ ರವಿವಾರ‌, ಸೋಮವಾರದಿಂದ ಇದು ಜಾರಿಯಾಗಬಹುದು’ ಎಂದು ತಿಳಿಸಿದ್ದಾರೆ. ಸಭೆಯಲ್ಲಿ, ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ ಆಗಮಿಸುವ ಜನರನ್ನು ತಡೆಯುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next