ನವದೆಹಲಿ: ಭಾರತದಲ್ಲಿ ರಷ್ಯಾದ ಸ್ಫುಟ್ನಿಕ್-v ಲಸಿಕೆ ಆಗಸ್ಟ್ ನಲ್ಲಿ ತಯಾರಾಗಲಿದ್ದು, 850 ಮಿಲಿಯನ್ ಡೋಸ್ ಉತ್ಪಾದನೆಯಾಗಲಿದೆ. ಜಗತ್ತಿನ ಶೇ.65ರಿಂದ 70ರಷ್ಟು ಸ್ಫುಟ್ನಿಕ್ ಲಸಿಕೆ ಭಾರತದಲ್ಲಿಯೇ ಉತ್ಪಾದನೆಯಾಗಲಿದೆ ಎಂದು ರಷ್ಯಾದ ಭಾರತೀಯ ರಾಯಭಾರಿ ಬಾಲ ವೆಂಕಟೇಶ್ ವರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ:ಧಾರವಾಡದಲ್ಲಿ ಎರಡು ದಿನದ ಸಂಪೂರ್ಣ ಲಾಕ್ ಡೌನ್: ಜನತೆಯಿಂದ ಉತ್ತಮ ಬೆಂಬಲ
ಸುದ್ದಿಗಾರರ ಜತೆ ಮಾತನಾಡಿದ ಬಾಲ ವೆಂಕಟೇಶ್ ವರ್ಮಾ ಅವರು, ಭಾರತ ಸುಮಾರು 850 ಮಿಲಿನ್ ಡೋಸ್ ನಷ್ಟು ಸ್ಫುಟ್ನಿಕ್v ಲಸಿಕೆಯನ್ನು ಉತ್ಪಾದಿಸಲಿದೆ ಎಂದು ಹೇಳಿದರು.
ರಷ್ಯಾ ಈಗಾಗಲೇ ಕೋವಿಡ್ 19 ಸೋಂಕಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ 1,50,000ಕ್ಕಿಂತಲು ಅಧಿಕ ಸ್ಫುಟ್ನಿಕ್ v ಲಸಿಕೆಯನ್ನು ಸರಬರಾಜು ಮಾಡಿದೆ. ಮೇ ಕೊನೆಯ ವಾರದೊಳಗೆ ರಷ್ಯಾ ಭಾರತಕ್ಕೆ 3 ಮಿಲಿಯನ್ ಸ್ಫುಟ್ನಿಕ v ಲಸಿಕೆಯನ್ನು ಸರಬರಾಜು ಮಾಡಲಿದೆ ಎಂದು ವರದಿ ವಿವರಿಸಿದೆ.
ಭಾರತದಲ್ಲಿ ಆಗಸ್ಟ್ ನಿಂದ ಸ್ಫುಟ್ನಿಕ್ v ಲಸಿಕೆ ಉತ್ಪಾದನೆ ಆರಂಭವಾಗಲಿದೆ. ಸದ್ಯದ ಯೋಜನೆ ಪ್ರಕಾರ ಭಾರತದಲ್ಲಿ 850 ಮಿಲಿಯನ್ ಸ್ಫುಟ್ನಿಕ್ v ಲಸಿಕೆಯನ್ನು ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ ಎಂದು ವರ್ಮಾ ತಿಳಿಸಿದ್ದಾರೆ. ಭಾರತದಲ್ಲಿ ಸ್ಫುಟ್ನಿಕ್ v ಲಸಿಕೆಯನ್ನು ಮೂರು ಹಂತಗಳಲ್ಲಿ ಉತ್ಪಾದಿಸಲಾಗುತ್ತದೆ.
ಮೊದಲ ಹಂತದಲ್ಲಿ ಲಸಿಕೆ ರಷ್ಯಾದಿಂದ ಸರಬರಾಜಾಗಲಿದೆ.ಎರಡನೇ ಹಂತದಲ್ಲಿ ಆರ್ ಡಿಐಎಫ್ ರಖಂ ಆಗಿ ಲಸಿಕೆಯನ್ನು ಭಾರತಕ್ಕೆ ರವಾನಿಸಲಿದೆ. ಹೈದರಾಬಾದ್ ನ ಡಾ.ರೆಡ್ಡೀಸ್ ಲ್ಯಾಬೋರೇಟರಿಯಲ್ಲಿ ಮೇ 14ರಂದು ರಷ್ಯಾದ ಕೋವಿಡ್ 19 ಲಸಿಕೆಯನ್ನು ಪ್ರಾಯೋಗಿಕವಾಗಿ ಬಿಡುಗಡೆಗೊಳಿಸಿತ್ತು ಸ್ಫುಟ್ನಿಕ್ ಲಸಿಕೆ ಬೆಲೆ 948 ರೂಪಾಯಿ ಎಂದು ನಿಗದಿಪಡಿಸಿದೆ.