Advertisement
ಸದ್ಯ ಭಾರತ ಐದನೇ ಅತೀದೊಡ್ಡ ಆರ್ಥಿಕತೆಯಾಗಿದೆ. ಕಳೆದ ವರ್ಷವಷ್ಟೇ ಇಂಗ್ಲೆಂಡ್ ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ್ದ ಭಾರತ, ಸದ್ಯದಲ್ಲೇ 6ನೇ ಸ್ಥಾನಕ್ಕೆ ಜಾರ ಲಿದೆ. ಆದರೆ 2025ರ ವೇಳೆಗೆ ಮತ್ತೆ 5ನೇ ಸ್ಥಾನಕ್ಕೆ ಏರಲಿದೆ ಎಂದು ಇದೇ ಸಂಸ್ಥೆ ಭವಿಷ್ಯ ನುಡಿದಿದೆ.
Related Articles
Advertisement
2030ರ ಅನಂತರ, ಅಂದರೆ 2035ರ ವೇಳೆಗೆ ಭಾರತದ ಅಭಿವೃದ್ಧಿ ದರ(ಜಿಡಿಪಿ) ಶೇ.5.8ಕ್ಕೆ ಕುಸಿತ ಕಾಣಲಿದೆ. ಇದಕ್ಕೆ ಕಾರಣ, ಅಷ್ಟೊತ್ತಿಗಾಗಲೇ, ಭಾರತ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರಲಿದ್ದು, ಹೀಗಾಗಿ ಜಿಡಿಪಿ ದರವೂ ಕುಸಿತ ಕಾಣಲಿದೆ.
2028ಕ್ಕೆ ಚೀನ ಟಾಪ್ಇನ್ನು 2028ರ ವೇಳೆಗೆ ಚೀನ ಜಗತ್ತಿನ ನಂ.1 ಆರ್ಥಿಕತೆಯಾಗಿ ರೂಪುಗೊಳ್ಳಲಿದೆ. ಸದ್ಯ ಕೊರೊನಾ ಕಾಲದಲ್ಲೂ ಆರ್ಥಿಕತೆ ಬೀಳದಂತೆ ನೋಡಿಕೊಂಡಿರುವ ಚೀನ, ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾಣಲಿದೆ ಎಂದು ಇದೇ ಸಂಶೋಧನೆ ಹೇಳಿದೆ. ಹೀಗಾಗಿ, 2028ಕ್ಕೆ ಅಮೆರಿಕವನ್ನು ಚೀನ ಹಿಂದಿಕ್ಕಲಿದೆ ಎಂದಿದೆ. ಹಾಲಿ ಟಾಪ್ 6 ದೇಶಗಳು
1. ಅಮೆರಿಕ
2. ಚೀನ
3. ಜಪಾನ್
4. ಜರ್ಮನಿ
5. ಭಾರತ
6 ಇಂಗ್ಲೆಂಡ್