Advertisement

2023ರಲ್ಲಿ ಗಗನಯಾನ

06:44 PM Dec 09, 2021 | Team Udayavani |

ನವದೆಹಲಿ: ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಗಗನಯಾನವನ್ನು 2023ರಲ್ಲಿ ನಡೆಸುವುದಾಗಿ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

Advertisement

ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಅವರು ಗುರುವಾರ ಈ ಉತ್ತರ ನೀಡಿದ್ದಾರೆ.

ಗಗನಯಾನಕ್ಕೂ ಮೊದಲು ಮಾನವರಹಿತ ಪರೀಕ್ಷಾರ್ಥ ಉಡಾವಣೆಯನ್ನು 2022ರ ಮಧ್ಯದಲ್ಲಿ ನಡೆಸಲಾಗುವುದು. ಅದಾದ ನಂತರ ರೋಬೋಟ್‌ನ್ನು ಪರೀಕ್ಷಾರ್ಥ ಹಾರಾಟದ ಭಾಗವಾಗಿ ಕಳುಹಿಸಿಕೊಡಲಾಗುವುದು. ಮೂರನೆಯದಾಗಿ ಮನುಷ್ಯರನ್ನು ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕದಿಂದಾಗಿ ಗಗನಯಾನ ಸಾಕಷ್ಟು ವಿಳಂಬವಾಯಿತು, ಆದರೆ ಅದಕ್ಕೆ ಸಕಲ ಸಿದ್ಧತೆಯನ್ನೂ ನಾವು ಮಾಡಿಕೊಳ್ಳುತ್ತಿದ್ದೇವೆ ಎಂದು ಸಚಿವರುತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next