Advertisement

ಇಬ್ಬರು ಪಾಕ್‌ ನಿವಾಸಿಗಳಿಗೆ ವೈದ್ಯಕೀಯ ವಿಸಾ: ಸುಷ್ಮಾ

06:55 AM Oct 08, 2017 | Team Udayavani |

ನವದೆಹಲಿ: ಪಾಕಿಸ್ತಾನದ ಇಬ್ಬರು ನಿವಾಸಿಗಳಿಗೆ ವೈದ್ಯಕೀಯ ವೀಸಾ ನೀಡಲು ಭಾರತ ನಿರ್ಧರಿಸಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ.

Advertisement

ಮಾನವೀಯ ನೆಲೆ ಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿ ದ್ದಾರೆ. ಪಿತ್ತಜನಕಾಂಗದ ಕಸಿ ಮತ್ತು ತೆರೆದ ಹೃದಯದ ಶಸ್ತ್ರಚಿಕಿತ್ಸೆಗಾಗಿ ಲಾಹೋರ್‌ ಮೂಲದ ವ್ಯಕ್ತಿ ಮತ್ತು  3 ವರ್ಷದ ಮಗುವೊಂದಕ್ಕೆ ವೈದ್ಯಕೀಯ ವೀಸಾ ನೀಡಲಾಗು ತ್ತಿದೆ ಎಂದಿದ್ದಾರೆ ಸುಷ್ಮಾ. ಜತೆಗೆ ಅವರಿಗೆ ಉತ್ತಮ ಚಿಕಿತ್ಸೆ ದೊರಕಲಿ, ಇಬ್ಬರು ಬೇಗ ಗುಣಮುಖರಾಗಲಿ ಎಂದು ಸುಷ್ಮಾ ಟ್ವೀಟ್‌ ಮಾಡಿ ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next