Advertisement

ಸ್ವಿಸ್‌ ಖಾತೆ ವಿವರಗಳು ಸೆಪ್ಟಂಬರ್‌ನಲ್ಲಿ ಲಭ್ಯ

01:05 AM Jul 11, 2019 | mahesh |

ಹೊಸದಿಲ್ಲಿ: ಕಪ್ಪುಹಣದ ವಿರುದ್ಧದ ಸರಕಾರದ ಹೋರಾಟಕ್ಕೆ ಮಹತ್ವದ ಜಯ ಸೆಪ್ಟಂಬರ್‌ನಲ್ಲಿ ಸಿಗಲಿದ್ದು, ಸ್ವಿಸ್‌ಬ್ಯಾಂಕ್‌ನಲ್ಲಿ ಎಲ್ಲ ಭಾರತೀಯರು ಹೊಂದಿರುವ ಖಾತೆ ವಿವರಗಳು ಲಭ್ಯವಾಗಲಿವೆ. ಅಷ್ಟೇ ಅಲ್ಲ, 2018ರಲ್ಲಿ ಬ್ಯಾಂಕ್‌ ಖಾತೆ ಮುಚ್ಚಿದವರ ವಿವರಗಳೂ ಭಾರತಕ್ಕೆ ಸಿಗಲಿದೆ. ಮಾಹಿತಿ ಸ್ವಯಂಚಾಲಿತ ವರ್ಗಾವಣೆ ಒಪ್ಪಂದದ ಅಡಿಯಲ್ಲಿ ಈ ಮಾಹಿತಿ ವರ್ಗಾವಣೆ ಮಾಡಲಾಗುತ್ತಿದೆ.

Advertisement

ಖಾತೆ ಸಂಖ್ಯೆ, ಖಾತೆಯಲ್ಲಿರುವ ಹಣ ಮತ್ತು ಎಲ್ಲ ಹಣಕಾಸು ಮಾಹಿತಿಯೂ ಇದರಲ್ಲಿ ಸೇರಿರಲಿದೆ. ಸೆಪ್ಟಂಬರ್‌ನಲ್ಲಿ ಮೊದಲ ಕಂತಿನಲ್ಲಿ ಮಾಹಿತಿ ಲಭ್ಯವಾಗಲಿದ್ದು, ಅನಂತರ ಪ್ರತಿ ವರ್ಷ ಇದೇ ರೀತಿ ಮಾಹಿತಿ ಭಾರತಕ್ಕೆ ಸ್ವಿಸ್‌ ಬ್ಯಾಂಕ್‌ಗಳಿಂದ ಸಿಗಲಿದೆ. ಈಗಾಗಲೇ ಆಯ್ದ 100 ಭಾರತೀಯ ವ್ಯಕ್ತಿ ಹಾಗೂ ಸಂಸ್ಥೆಗಳ ಖಾತೆ ಮಾಹಿತಿಯನ್ನು ಸ್ವಿಸ್‌ ಬ್ಯಾಂಕ್‌ಗಳು ಭಾರತದೊಂದಿಗೆ ಹಂಚಿಕೊಂಡಿವೆ. ಈ ಖಾತೆಗಳ ಬಗ್ಗೆ ಭಾರತಕ್ಕೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ವಿನಂತಿಯ ಮೇರೆಗೆ ಸ್ವಿಸ್‌ ಬ್ಯಾಂಕ್‌ಗಳು ನೀಡಿದ್ದವು. ಆದರೆ ಈಗ ಸ್ವಯಂಚಾಲಿತ ವ್ಯವಸ್ಥೆ ಯಲ್ಲಿ ಮಾಹಿತಿಯನ್ನು ಸ್ವಿಸ್‌ ಬ್ಯಾಂಕ್‌ಗಳು ನೀಡಲಿವೆ.

ಇದರಿಂದ ಎಷ್ಟು ಭಾರತೀಯರು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಪ್ರಸ್ತುತ ಖಾತೆ ಹೊಂದಿದ್ದಾರೆ ಎಂಬುದು ತಿಳಿದು ಬರಲಿದ್ದು, ಇವರು ತೆರಿಗೆ ಪಾವತಿ ಮಾಡಿ ವಿದೇಶಕ್ಕೆ ಹಣವನ್ನು ತೆಗೆದುಕೊಂಡು ಹೋಗಿದ್ದಾರೆಯೇ ಎಂಬುದನ್ನು ಭಾರತದ ತೆರಿಗೆ ಅಧಿಕಾರಿಗಳು ಪರಿಶೀಲಿಸಲು ನೆರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next