Advertisement

ಭಾರತದಿಂದ ವಿದೇಶಕ್ಕೆ ಪ್ರವಾಸ ಮಾಡುವವರ ಸಂಖ್ಯೆ ಗಣನೀಯ ಹೆಚ್ಚಳ

01:55 PM Aug 08, 2022 | Team Udayavani |

ನವದೆಹಲಿ: ಭಾರತದಿಂದ ವಿದೇಶಕ್ಕೆ ಪ್ರವಾಸ ಮಾಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. 2024ರೊಳಗೆ 3.34 ಲಕ್ಷ ಕೋಟಿ ರೂ.ಗೆ ತಲುಪಲಿದೆ ಎಂದು ವರದಿ ತಿಳಿಸಿದೆ.

Advertisement

2019ರಲ್ಲಿ 1.81 ಲಕ್ಷ ಕೋಟಿ ರೂ. ಹಣವನ್ನು ಭಾರತೀಯರು ವಿದೇಶಿ ಪ್ರವಾಸಕ್ಕೆ ಬಳಸಿದ್ದರೆ, 2021ರಲ್ಲಿ 1 ಲಕ್ಷ ಕೋಟಿ ರೂ. ಹಣವನ್ನು ಖರ್ಚು ಮಾಡಿದ್ದರು. ಅದು 2024ರೊಳಗೆ 3.34 ಲಕ್ಷ ಕೋಟಿ ರೂ.ಗೆ ಏರಲಿದೆ ಎಂದು ನಂಗಿಯಾ ಆ್ಯಂಡರ್ಸನ್‌ ಎಲ್‌ಎಲ್‌ಪಿ ಸಂಸ್ಥೆಯು ತನ್ನ ವರದಿಯಲ್ಲಿ ತಿಳಿಸಿದೆ.

ಭಾರತದ ಯುವಜನತೆ ಹಾಗೂ ಮಧ್ಯಮ ವರ್ಗದ ಜನರು ಹೆಚ್ಚಾಗಿ ವಿದೇಶಿ ಪ್ರವಾಸಕ್ಕೆ ಹೊರಡುತ್ತಿದ್ದಾರೆ. ವಿದೇಶಕ್ಕೆ ಪ್ರವಾಸ ತೆರಳುತ್ತಿರುವ ಭಾರತೀಯರಲ್ಲಿ ಶೇ.20 ಮಂದಿ ಯುರೋಪ್‌ ಖಂಡಗಳಿಗೆ ತೆರಳುತ್ತಿದ್ದರೆ, ಶೇ.10 ಮಂದಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ಪ್ರಯಾಣಿಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next