Advertisement

Modi; ಮೂರನೇ ಅವಧಿಯಲ್ಲಿ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆ: ಪ್ರಧಾನಿ

06:47 PM Dec 17, 2023 | Team Udayavani |

ಸೂರತ್ :ತನ್ನ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

Advertisement

ವಿಸ್ತಾರವಾದ ಸೂರತ್ ಡೈಮಂಡ್ ಬೋರ್ಸ್ ಅನ್ನು ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ”ಇದು ನವ ಭಾರತದ ಶಕ್ತಿ ಮತ್ತು ನಿರ್ಣಯದ ಸಂಕೇತ. ಸೂರತ್ ವಜ್ರ ಉದ್ಯಮವು 8 ಲಕ್ಷ ಜನರಿಗೆ ಉದ್ಯೋಗ ನೀಡುತ್ತಿದೆ ಮತ್ತು ಹೊಸ ಬೋರ್ಸ್‌ನಿಂದ ಇನ್ನೂ 1.5 ಲಕ್ಷ ಉದ್ಯೋಗಗಳು ಸೇರ್ಪಡೆಯಾಗಲಿವೆ, ಇದು ಅಂತಾರಾಷ್ಟ್ರೀಯ ವಜ್ರಾಭರಣ ವ್ಯವಹಾರಕ್ಕೆ ವಿಶ್ವದ ಅತಿದೊಡ್ಡ ಮತ್ತು ಆಧುನಿಕ ಕೇಂದ್ರವಾಗಿದೆ” ಎಂದರು.

“ಕಳೆದ 10 ವರ್ಷಗಳಲ್ಲಿ ಭಾರತವು 10 ನೇ ಸ್ಥಾನದಿಂದ ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಈಗ, ಮೋದಿಯ ಮೂರನೇ ಇನ್ನಿಂಗ್ಸ್‌ನಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ. ಸರಕಾರವು ಮುಂದಿನ 25 ವರ್ಷಗಳ ಗುರಿಗಳನ್ನು ಸಹ ನಿಗದಿಪಡಿಸಿದೆ. ನಾವು USD 5-10 ಟ್ರಿಲಿಯನ್ ಆರ್ಥಿಕತೆಯಾಗುವುದರ ಜತೆಗೆ ರಫ್ತುಗಳನ್ನು ದಾಖಲೆಯ ಎತ್ತರಕ್ಕೆ ಕೊಂಡೊಯ್ಯುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಸೂರತ್ ಡೈಮಂಡ್ ಬೋರ್ಸ್ (SDB) ಕಟ್ಟಡವು ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣವಾಗಿದ್ದು, 67 ಲಕ್ಷ ಚದರ ಅಡಿಗಳಷ್ಟು ಮಹಡಿಯನ್ನು ಹೊಂದಿದೆ, ಇದು ಸೂರತ್ ನಗರದ ಸಮೀಪವಿರುವ ಖಾಜೋಡ್ ಗ್ರಾಮದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next