ನವದೆಹಲಿ: ನೆಲದಿಂದ ನೆಲಕ್ಕೆ ಛಿಮ್ಮುವ ಬ್ರಹ್ಮೋಸ್ ಕ್ಷಿಪಣಿಯ ಯಶಸ್ವೀ ಪರೀಕ್ಷೆಯನ್ನು ಮಂಗಳವಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ನಡೆಸಲಾಗಿದೆ. ಚೀನಾ ಜತೆಗಿನ ಗಡಿ ಬಿಕ್ಕಟ್ಟಿನ ನಡುವೆಯೇ ಈ ಪರೀಕ್ಷೆ ನಡೆದಿದೆ.
ಹೊಸ ಪರೀಕ್ಷೆಯಲ್ಲಿ ಹಾಲಿ ಇರುವ 290 ಕಿಮೀ ಗುರಿಯ ಬದಲಾಗಿ 400 ಕಿಮೀ ದೂರದಲ್ಲಿರುವ ಶತ್ರು ನೆಲೆಯನ್ನು ಛೇದಿಸಲು ಅನುಕೂಲವಾಗುವಂತೆ ಪರಿಷ್ಕರಿಸಿ ಯಶಸ್ವೀ ಪರೀಕ್ಷೆ ನಡೆಸಲಾಗಿದೆ.
ಐಎಎಫ್ ಮತ್ತು ಭಾರತೀಯ ನೌಕಾ ಪಡೆ ಮುಂದಿನ ಕೆಲವು ದಿನಗಳ ಕಾಲ ಪ್ರತ್ಯೇಕವಾಗಿ ಬ್ರಹ್ಮೋಸ್ ಕ್ಷಿಪಣಿಯ ವಿವಿಧ ಆವೃತ್ತಿಗಳ ಪರೀಕ್ಷೆಯನ್ನು ನಡೆಸಲಿವೆ.
ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ಕ್ಷಿಪಣಿಗಳನ್ನು ನಿಯೋಜನೆಗೊಳಿಸಿರುವಂತೆಯೇ ಮತ್ತಷ್ಟು ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ:148 ದಿನಗಳಲ್ಲಿ 267 ಆ್ಯಪ್ಸ್ ಬ್ಲಾಕ್; ಮಂಗಳವಾರ ಬ್ಯಾನ್‌ಗೊಂಡ ಆ್ಯಪ್‌ಗಳ ವಿವರ ಇಲ್ಲಿದೆ
ಅ.18ರಂದು ನೌಕಾ ಪಡೆಗಾಗಿರುವ ಬ್ರಹ್ಮೋಸ್ ಕ್ಷಿಪಣಿಯ ಯಶಸ್ವೀ ಪರೀಕ್ಷೆ ನಡೆಸಲಾಗಿತ್ತು. ಅ.30ರಂದು ಐಎಎಫ್ ಕೂಡ ಅದೇ ಮಾದರಿ ಪರೀಕ್ಷೆ ನಡೆಸಿತ್ತು. ಎರಡು ತಿಂಗಳ ಅವಧಿಯಲ್ಲಿ ರೌದ್ರಮ್-1 ಸೇರಿದಂತೆ ಹಲವು ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆಯನ್ನು ಭಾರತ ಯಶಸ್ವಿಯಾಗಿ ನಡೆಸಿದೆ.