Advertisement

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

01:55 AM Apr 27, 2024 | Vishnudas Patil |

ಹೊಸದಿಲ್ಲಿ: ದೇಶ ಬಿಟ್ಟು ಪರಾರಿಯಾಗಿರುವ ಮದ್ಯ ದೊರೆ ವಿಜಯ್‌ ಮಲ್ಯನನ್ನು ಯಾವುದೇ ಪೂರ್ವ ಷರತ್ತುಗಳಿಲ್ಲದೇ ಹಸ್ತಾಂತರ ಮಾಡಬೇಕು ಎಂದು ಫ್ರಾನ್ಸ್‌ ಅಧಿಕಾರಿಗಳಿಗೆ ಭಾರತ ಸರಕಾರ ಮನವಿ ಮಾಡಿದೆ ಎಂದು ವರದಿಗಳು ತಿಳಿಸಿದೆ. ಎ.15ರಂದು ನಡೆದ ಉಗ್ರ ನಿಗ್ರಹ ಕುರಿತ ಭಾರತ-ಫ್ರಾನ್ಸ್‌ ಜಂಟಿ ಕಾರ್ಯಪಡೆಯ 16ನೇ ಸಭೆಯಲ್ಲಿ ಈ ಕುರಿತು ಪ್ರಸ್ತಾವಿಸಲಾಯಿತು.

Advertisement

ಈ ವೇಳೆ ಕೆಲವು ಷರತ್ತುಗಳೊಂದಿಗೆ ಮಲ್ಯ ಹಸ್ತಾಂತರಿಸುವುದಾಗಿ ಫ್ರಾನ್ಸ್‌ ಹೇಳಿತು. ಆದರೆ ಬೇಷರತ್ತಾಗಿ ಮಲ್ಯ ಹಸ್ತಾಂತರಿಸಲು ಫ್ರಾನ್ಸ್‌ ಒಪ್ಪಬೇಕು ಎಂದು ಭಾರತ ಕೋರಿತು. ಪ್ರಸ್ತುತ ಮಲ್ಯ ಬ್ರಿಟನ್‌ನಲ್ಲಿದ್ದಾರೆ. ಆದರೆ ಫ್ರಾನ್ಸ್‌ನಲ್ಲೂ ಅವರು ಆಸ್ತಿ ಹೊಂದಿದ್ದಾರೆ. ಬೇರೆ ದೇಶಕ್ಕೆ ಪಲಾಯನ ಮಾಡ ದಂತೆ, ಅವರು ಆಸ್ತಿ ಹೊಂದಿರುವ ದೇಶಗಳ ಜತೆಗೆ ಗಡೀಪಾರು ಕುರಿತು ಭಾರತ ಮಾತುಕತೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next