ಹೊಸದಿಲ್ಲಿ : ಭಾರತೀಯರಿಗೆ ಮಾಲ್‌ದೀವ್ಸ್ ವರ್ಕ್ ವೀಸಾ ನಿರಾಕರಿಸಿರುವುದನ್ನು ಭಾರತ ಅಲ್ಲಿನ ಸರಕಾರದ ಜತೆಗೆ ಚರ್ಚೆಗೆ ಎತ್ತಿಕೊಂಡಿದೆ. ಭಾರತೀಯರಿಗೆ ವರ್ಕ್ ವೀಸಾ ನಿರಾಕರಿಸಿದರೆ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದೀತು ಎಂದು ಭಾರತ ಮಾಲ್‌ದೀವ್ಸ್‌ಗೆ ಎಚ್ಚರಿಕೆ ನೀಡಿದೆ.
ಮಾಲ್‌ದೀವ್ಸ್ ನೂರಾರು ಭಾರತೀಯರಿಗೆ ಈಚೆಗೆ ವರ್ಕ್ ವೀಸಾ ನಿರಾಕರಿಸಿರುವುದು ವರದಿಯಾಗಿತ್ತು. ಈ ದ್ವೀಪ ರಾಷ್ಟ್ರದ ಹಲವಾರು ಉದ್ಯೋಗಪತಿಗಳು ಸದ್ಯ ಭಾರತೀಯರಿಗೆ ವರ್ಕ್ ವೀಸಾ ಕೊಡಲಾಗುತ್ತಿಲ್ಲ ಎಂದು ಅರ್ಜಿದಾರರಿಗೆ ತಿಳಿಸಿದ್ದರು.
ಭಾರತದ ಮಾಲ್‌ದೀವ್ಸ್ ನಲ್ಲಿ ನೌಕಾಪಡೆಯ ಎರಡು ಅತ್ಯಾಧುನಿಕ “ಧ್ರುವ’ ಹೆಲಿಕಾಪ್ಟರ್ ಗಳನ್ನು ನಿಲ್ಲಿಸಿಟ್ಟಿರುವ ಬಗ್ಗೆಯೂ ಅಲ್ಲಿನ ಸರಕಾರ ಭಾರತವನ್ನು ಪ್ರಶ್ನಿಸಿದೆ. ಈ ವಿಷಯವೂ ಉಭಯ ಸರಕಾರಗಳ ನಡುವಿನ ಚರ್ಚೆಯ ವಿಷಯವಾಗಿದೆ.
ಮೇಲಾಗಿ ಭಾರತೀಯರಿಗೆ ವರ್ಕ್ ವೀಸಾ ನೀಡದಿದ್ದರೆ ಮಾಲ್‌ದೀವ್ಸ್‌ನ ಪ್ರವಾಸೋದ್ಯಮಕ್ಕೆ ಧಕ್ಕೆ ಉಂಟಾದೀತು ಎಂಬ ಎಚ್ಚರಿಕೆಯನ್ನು ಭಾರತ ನೀಡಿರುವುದು ಗಮನಾರ್ಹವಾಗಿದೆ.
ಮಾಲ್‌ದೀವ್ಸ್ ಸರಕಾರ ಭಾರತೀಯ ಹೆಲಿಕಾಪ್ಟರ್ ಜತೆಗಿರುವ ಸೇನಾ ಸಿಬಂದಿಗಳ ವೀಸಾವನ್ನು ಕೂಡ ನವೀಕರಿಸಿಲ್ಲ ಎಂದು ವರದಿಗಳು ತಿಳಳಿಸಿವೆ.
ವಕ್ ವೀಸಾ ನಿರಾಕರಣೆ ಕುರಿತಂತೆ ನೂರಕ್ಕೂ ಹೆಚ್ಚು ದೂರುಗಳು ಇತ್ಯರ್ಥಕ್ಕೆ ಬಾಕಿ ಇವೆ ಮತ್ತು ಭಾರತೀಯರು ವರ್ಕ್ ವೀಸಾಗಾಗಿ ಅರ್ಜಿ ಸಲ್ಲಿಸಬಾರದೆಂದೂ ತಾಕೀತು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.