Advertisement

ಭಾರತವೇ ಟಿ20 ವಿಶ್ವಕಪ್‌ ಫೇವರಿಟ್‌: ಗಿಲ್‌ಕ್ರಿಸ್ಟ್‌

10:54 PM Nov 06, 2019 | Team Udayavani |

ಮುಂಬಯಿ: ಮುಂದಿನ ವರ್ಷ ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತವೇ ಫೇವರಿಟ್‌ ಎಂದು ಕಾಂಗರೂ ನಾಡಿನ ಮಾಜಿ ನಾಯಕ ಆ್ಯಡಂ ಗಿಲ್‌ಕ್ರೀಸ್ಟ್‌ ಹೇಳಿದ್ದಾರೆ.

Advertisement

ಮುಂಬಯಿಯಲ್ಲಿ ನಡೆದ ಸಮಾ ರಂಭವೊಂದರಲ್ಲಿ ಮಾತನಾಡಿದ ಗಿಲ್‌ಕ್ರಿಸ್ಟ್‌, “ಟಿ20 ರ್‍ಯಾಂಕಿಂಗ್‌ನಲ್ಲಿ ಪಾಕಿಸ್ಥಾನ ನಂಬರ್‌ ವನ್‌ ಆಗಿರಬಹುದು, ಆದರೆ ಭಾರತವೇ ಮುಂದಿನ ಟಿ20 ವಿಶ್ವಕಪ್‌ ಫೇವರೀಟ್‌. ಇದು ಭವಿಷ್ಯವಲ್ಲ, ನನ್ನ ನಿರೀಕ್ಷೆ.

ಕಳೆದ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಕೆಲವು ಸಣ್ಣ ತಪ್ಪುಗಳಿಂದ ಎಡವಿತ್ತು. ಒಂದು ವೇಳೆ ಫೈನಲ್‌ ಪ್ರವೇಶಿಸುತ್ತಿದ್ದರೆ ಭಾರತವೇ ಕಪ್‌ ಗೆಲ್ಲುತ್ತಿತ್ತು’ ಎಂದರು. ಉಳಿದಂತೆ ಆಸ್ಟ್ರೇಲಿಯ, ಇಂಗ್ಲೆಂಡ್‌, ಕಿವೀಸ್‌ ಸೆಮಿಗೆ ಪ್ರವೇಶ ಪಡೆಯಬಹುದು ಎಂಬ ನಿರೀಕ್ಷೆ ಇದೆ ಎಂದು ಗಿಲ್‌ಕ್ರಿಸ್ಟ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next