Advertisement

ಪರಮಾಣು ಸಾಮರ್ಥ್ಯದ ಅಗ್ನಿ-5 ಕ್ಷಿಪಣಿ ಯಶಸ್ವೀ ಪರೀಕ್ಷೆ

11:54 AM Jan 18, 2018 | Team Udayavani |

ಅಬ್ದುಲ್‌ ಕಲಾಂ ದ್ವೀಪ, ಒಡಿಶಾ : ನೆಲದಿಂದ ನೆಲಕ್ಕೆ ದಾಳಿ ಎಸಗಬಲ್ಲ ಅಣು ಸಾಮರ್ಥ್ಯದ  ಅಗ್ನಿ-5 ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ. 

Advertisement

ಐದು ಸಾವಿರ ಕಿ.ಮೀ. ದೂರ ವ್ಯಾಪ್ತಿಯ ಈ ಬ್ಯಾಲಿಸ್ಟಿಕ್‌ ಮಿಸೈಲ್‌ ಅನ್ನು ಬೆಳಗ್ಗೆ 9.53ಕ್ಕೆ ಪರೀಕ್ಷಾರ್ಥವಾಗಿ ಯಶಸ್ವಿಯಾಗಿ ಪ್ರಯೋಗಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಅಗ್ನಿ-5 ಕ್ಷಿಪಣಿಯ ಐದನೇ ಪರೀಕ್ಷೆ ಇದಾಗಿದೆ. ನಾಲ್ಕನೇ ಪರೀಕೆಯನ್ನು 2016ರ ಡಿ.26ರಂದು ನಡೆಸಲಾಗಿತ್ತು. ಈ ಎಲ್ಲ ನಾಲ್ಕು ಪರೀಕ್ಷೆಗಳು ಯಶಸ್ವಿಯಾಗಿವೆ. 

ರಕ್ಷಣಾ ಸಚಿವೆ ನಿರ್ಮಲಾ ಸೀತಾರಮಣ್‌ ಅವರು ಅಗ್ನಿ-5ರ ಯಶಸ್ವೀ ಪರೀಕ್ಷಾ ಪ್ರಯೋಗವನ್ನು ದೃಢೀಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next