Advertisement

ಶತ್ರುಗಳ ಹದ್ದಿನ ಕಣ್ಣಿಗೆ ಭಾರತದ ಪ್ರತ್ಯಸ್ತ್ರ ರುದ್ರಂ

12:47 AM Oct 10, 2020 | mahesh |

ಭಾರತದ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸಿದ್ಧಪಡಿಸಿರುವ ವಿಕಿರಣ ನಿಗ್ರಹ ಸಾಮರ್ಥ್ಯವಿರುವ “ರುದ್ರಂ-1′ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಒಡಿಶಾದ ಕರಾವಳಿ ತೀರದಲ್ಲಿ ಶುಕ್ರವಾರ ಯಶಸ್ವಿಯಾಗಿ ನಡೆಯಿತು. ಬೆಳಗ್ಗೆ 10.30ರ ಸುಮಾರಿಗೆ, ಸುಖೋಯ್‌-30 ಯುದ್ಧ ವಿಮಾನದಲ್ಲಿ ತರಲಾದ ಈ ಕ್ಷಿಪಣಿಯನ್ನು ಉಡಾಯಿಸಲಾಗಿದ್ದು, ಅದು ನಿಗದಿತ ಸಮಯದಲ್ಲಿ ನಿಖರ ಗುರಿ ತಲುಪಿತು ಎಂದು ಹೇಳಲಾಗಿದೆ.

Advertisement

ಏನಿದರ ವಿಶೇಷ?
ಬಹುಮುಖ್ಯವಾಗಿ ಇದು ಶತ್ರು ಪಾಳೆಯದಲ್ಲಿರುವ ರೇಡಾರ್‌ಗಳು, ಪರಿವೀಕ್ಷಣ ವ್ಯವಸ್ಥೆಗಳನ್ನು ಧ್ವಂಸಗೊಳಿಸಲು ಬಳಸುವಂಥ ಕ್ಷಿಪಣಿ. ಹೀಗೆ, ಶತ್ರುಗಳ ವ್ಯವಸ್ಥೆಗಳನ್ನು ಧ್ವಂಸಗೊಳಿಸುವಿಕೆಯನ್ನು “ಸಪ್ರಷನ್‌ ಆಫ್ ಎನಿಮಿ ಏರ್‌ ಡಿಫೆನ್ಸ್‌’ (ಖಉಅಈ) ಎಂದು ಕರೆಯುತ್ತಾರೆ. ಇಂಥದ್ದೊಂದು ಕ್ಷಿಪಣಿಯೊಂದು ನಮ್ಮ ಭಾರತದಲ್ಲಿ ಅಭಿವೃದ್ಧಿಗೊಳ್ಳುತ್ತಿರುವುದು ಇದೇ ಮೊದಲು.

ತಂತ್ರಜ್ಞಾನವೇನು?
“ದ ನ್ಯೂ ಜನರೇಷನ್‌ ಆ್ಯಂಟಿ ರೇಡಿಯೇಷನ್‌ ಮಿಸೈಲ್‌’ (ಎನ್‌ಜಿಎಆರ್‌ಎಂ) ತಂತ್ರಜ್ಞಾನದಡಿ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ನೆಲದಿಂದ 500 ಮೀ.ನಿಂದ 15 ಕಿ.ಮೀ. ಎತ್ತರದವರೆಗೆ ಅಂತರದಲ್ಲಿ ಈ ಕ್ಷಿಪಣಿಯನ್ನು ಬಳಸಬಹುದು. ಪರೀûಾರ್ಥವಾಗಿ ಇದನ್ನು ಸುಖೋಯ್‌-30ರಲ್ಲಿ ಉಡಾಯಿಸಲಾಗಿದ್ದರೂ, ಈ ಕ್ಷಿಪಣಿಯನ್ನು ಭಾರತದ ವಾಯುಪಡೆಯಲ್ಲಿರುವ ಇನ್ನಿತರ ವಿಮಾನಗಳಾದ ಮಿರಾಜ್‌ 2000, ಜಾಗ್ವಾರ್‌, ಎಚ್‌ಎಎಲ್‌ ನಿರ್ಮಿತ ತೇಜಸ್‌, ಎಚ್‌ಎಎಲ್‌ ತೇಜಸ್‌ ಮಾರ್ಕ್‌ 2 ಎಂಬ ಯುದ್ಧವಿಮಾನಗಳಲ್ಲಿಯೂ ಇದನ್ನು ಬಳಸುವಂತೆ ರೂಪಿಸಲಾಗಿದೆ.

140 ಕೆ.ಜಿ. ಕ್ಷಿಪಣಿಯ ತೂಕ
15 ಕಿ.ಮೀ. ನೆಲದಿಂದ ಹದಿನೈದು ಕಿ.ಮೀ.ವರೆಗೂ ಉಡಾಯಿಸಬಲ್ಲ ಕ್ಷಿಪಣಿ
240 ಕಿ.ಮೀ. ರುದ್ರಂ-1 ಕ್ಷಿಪಣಿ  ಕ್ರಮಿಸಬಹುದಾದ ದೂರ

Advertisement

Udayavani is now on Telegram. Click here to join our channel and stay updated with the latest news.

Next