Advertisement

2000 ಕಿ.ಮೀ.ವರೆಗೂ ದಾಳಿ ನಡೆಸಬಲ್ಲ ಅತ್ಯಾಧುನಿಕ ಅಗ್ನಿ ಪ್ರೈಮ್ ಕ್ಷಿಪಣಿ ಯಶಸ್ವಿ ಉಡಾವಣೆ

01:58 PM Jun 28, 2021 | Team Udayavani |

ನವದೆಹಲಿ:ಒಡಿಶಾ ಕರಾವಳಿ ಪ್ರದೇಶದಲ್ಲಿ ಭಾರತ ಸೋಮವಾರ(ಜೂನ್ 28) ಹೊಸ ತಲೆಮಾರಿನ ನೂತನ ಅತ್ಯಾಧುನಿಕ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದ್ದು, ಇದು ಎರಡು ಸಾವಿರ ಕಿಲೋ ಮೀಟರ್ ದೂರದವರೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಕೆಂಪುಕೋಟೆ ಹಿಂಸಾಚಾರ ಪ್ರಕರಣ: ಪಂಜಾಬ್ ನಲ್ಲಿ ಆರೋಪಿ ಗುರ್ಜೋತ್ ಸಿಂಗ್ ಬಂಧನ

ಈ ಹೊಸ ಪರಮಾಣು ಸಾಮರ್ಥ್ಯದ ಕ್ಷಿಪಣಿಯನ್ನು ಸಂಕೀರ್ಣ ಉಪಕರಣಗಳಿಂದ ತಯಾರಿಸಲ್ಪಟ್ಟಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ನೂತನ ಅಗ್ನಿ ಪ್ರೈಮ್ ಕ್ಷಿಪಣಿಯಲ್ಲಿ ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದು ಡಿಆರ್ ಡಿಒ ಅಧಿಕಾರಿಗಳು ತಿಳಿಸಿದ್ದಾರೆ.

ಅತ್ಯಾಧುನಿಕ ತಂತ್ರಜ್ಞಾನದ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಸೋಮವಾರ ಒಡಿಶಾ ತೀರದಲ್ಲಿ ಬೆಳಗ್ಗೆ 10.55ಕ್ಕೆ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಕ್ಷಿಪಣಿ ಉಡಾವಣೆ ಮತ್ತು ಸಾಮರ್ಥ್ಯದ ಪರೀಕ್ಷೆಗಾಗಿ ಪೂರ್ವ ಕರಾವಳಿಯುದ್ಧಕ್ಕೂ ಇರುವ ವಿವಿಧ ಟೆಲಿಮೆಟ್ರಿ ಮತ್ತು ರಾಡಾರ್ ಕೇಂದ್ರಗಳು ಪರಿಶೀಲನೆ ನಡೆಸಿರುವುದಾಗಿ ವರದಿ ಹೇಳಿದೆ. ಅಗ್ನಿ ಪ್ರೈಮ್ ಕ್ಷಿಪಣಿ ಸೂಕ್ತ ಪಥದಲ್ಲಿ ಚಲಿಸಿದ್ದು, ಉನ್ನತ ಮಟ್ಟದ ನಿಖರತೆಯೊಂದಿಗೆ ಗುರಿ ತಲುಪಿರುವುದಾಗಿ ಡಿಆರ್ ಡಿಒ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next