ಅಲ್ ರಯಾನ್ (ಕತಾರ್): ನಾಕೌಟ್ ಪ್ರವೇಶ ಕಠಿನವಾದರೂ ಅಸಾಧ್ಯವೇನಲ್ಲ ಎಂಬ ಸ್ಥಿತಿಯಲ್ಲಿರುವ ಭಾರತ, ಎಎಫ್ಸಿ ಏಷ್ಯನ್ ಕಪ್ ಫುಟ್‌ಬಾಲ್ ಕೂಟದ ಶನಿವಾರದ ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯವನ್ನು ಎದುರಿಸಲಿದೆ.
“ಬಿ’ ವಿಭಾಗದಲ್ಲಿರುವ ಭಾರತ, ಅನಂತರ ಉಜ್ಬೆಕಿಸ್ಥಾನ (ಜ. 18) ಮತ್ತು ಸಿರಿಯಾ (ಜ. 23) ವಿರುದ್ಧ ಆಡಲಿದೆ.
ಪ್ರತೀ ಗುಂಪಿನ ಅಗ್ರ 2 ತಂಡಗಳು ಹಾಗೂ ತೃತೀಯ ಸ್ಥಾನ ಪಡೆದ ಅಗ್ರ 4 ತಂಡಗಳಿಗೆ ನಾಕೌಟ್ ಅವಕಾಶ ಲಭಿಸಲಿದೆ.
ಕೋಚ್ ಐಗರ್ ಸ್ಟಿಮ್ಯಾಕ್ ಲೆಕ್ಕಾಚಾರದಂತೆ, ಆಸ್ಟ್ರೇಲಿಯ ಮತ್ತು ಉಜ್ಬೆಕಿಸ್ಥಾನ “ಬಿ’ ವಿಭಾಗದಲ್ಲಿ ಮೊದಲೆರಡು ಸ್ಥಾನ ಅಲಂಕರಿಸಲಿವೆ.
ಭಾರತ ಕಳೆದೆರಡು ಆವೃತ್ತಿಗಳಲ್ಲಿ (2011 ಮತ್ತು 2019) ಗ್ರೂಪ್ ಹಂತದಲ್ಲೇ ನಿರ್ಗಮಿಸಿತ್ತು.