Advertisement

ದೃಢ ನಿಲುವು…ಬಿಜೆಪಿ ರಾಷ್ಟ್ರಭಕ್ತಿಗೆ ಸಮರ್ಪಿತ,ವಿಪಕ್ಷಗಳದ್ದು ಪರಿವಾರ ಭಕ್ತಿ:ಪ್ರಧಾನಿ ಮೋದಿ

01:35 PM Apr 06, 2022 | Team Udayavani |

ನವದೆಹಲಿ: ಭಾರತೀಯ ಜನತಾ ಪಕ್ಷ ದೇಶ ಭಕ್ತಿಗೆ ಸಮರ್ಪಿತವಾಗಿದೆ. ಆದರೆ ವಿಪಕ್ಷಗಳಿಗೆ ಪರಿವಾರ ಭಕ್ತಿ ಮಾತ್ರ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ (ಏಪ್ರಿಲ್ 06) ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

Advertisement

ಇದನ್ನೂ ಓದಿ:ಭ್ರಷ್ಟಾಚಾರ: ಬಂಧನ ಭೀತಿಯಿಂದ ಇಮ್ರಾನ್ ಪತ್ನಿಯ ಗೆಳತಿ ಪಾಕ್ ನಿಂದ ಪರಾರಿ, ಯಾರೀಕೆ?

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಕುರಿತಂತೆ ಕಠಿಣ ನಿಲುವು ತಳೆಯುವಂತೆ ಭಾರತದ ಮೇಲೆ ಜಾಗತಿಕ ಮಟ್ಟದ ಒತ್ತಡ ಹೇರಲಾಗಿತ್ತು. ಆದರೆ ಇಡೀ ಜಗತ್ತು ಎರಡು ಪ್ರತಿಸ್ಪರ್ಧಿ ಬಣಗಳಾಗಿ ವಿಭಜನೆಗೊಂಡ ಸಂದರ್ಭದಲ್ಲಿ ಭಾರತ ದೃಢ ನಿಲುವು ತಳೆದಿದೆ ಮತ್ತು ರಾಷ್ಟ್ರದ ಹಿತಾಸಕ್ತಿಗೆ ಆದ್ಯತೆ ನೀಡಲಾಗಿದೆ ಎಂದು ಪ್ರಧಾನಿ ಹೇಳಿದರು.

ಇಂದು ಯಾವುದೇ ಆತಂಕ ಅಥವಾ ಒತ್ತಡವಿಲ್ಲದೇ ಭಾರತ ತನ್ನ ಹಿತಾಸಕ್ತಿಯಲ್ಲಿ ದೃಢ ನಿಲುವನ್ನು ಹೊಂದಿರುವ ಬಗ್ಗೆ ಜಗತ್ತು ನೋಡುತ್ತಿದೆ. ಯಾವಾಗ ಇಡೀ ಪ್ರಪಂಚ ಎರಡು ಪ್ರತಿಸ್ಪರ್ಧಿಗಳಾಗಿ ವಿಭಜನೆಯಾಯಿತೋ ಆ ಸಂದರ್ಭದಲ್ಲಿಯೂ ಭಾರತ ಮಾನವೀಯತೆ ಬಗ್ಗೆ ದೃಢ ಸಂಕಲ್ಪದಿಂದ ಮಾತನಾಡಿತ್ತು. ನಮ್ಮ ಸರ್ಕಾರ ಎಲ್ಲವನ್ನೂ ಮೀರಿ ರಾಷ್ಟ್ರೀಯ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಈ ಕಾರಣಗಳ ಜೊತೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪಕ್ಷ ಜಯಭೇರಿ ಗಳಿಸಿರುವ ಹಿನ್ನೆಲೆಯಲ್ಲಿ ಸಂಸ್ಥಾಪನಾ ದಿನಾಚರಣೆ ಬಿಜೆಪಿಗೆ ಹೆಚ್ಚು ಮಹತ್ವಪೂರ್ಣವಾಗಿದೆ ಎಂದರು. ಕೆಲವು ವಾರಗಳ ಹಿಂದಷ್ಟೇ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ನಾಲ್ಕು ರಾಜ್ಯಗಳಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಿದೆ. ಸುಮಾರು ಮೂರು ದಶಕಗಳ ನಂತರ ರಾಜ್ಯಸಭೆಯಲ್ಲಿ ಪಕ್ಷ ನೂರು ಸದಸ್ಯರನ್ನು ತಲುಪಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next