Advertisement

ಭಾರತ-ಲಂಕಾ ಕ್ರಿಕೆಟ್‌ ಸರಣಿ ಜು. 18ರಿಂದ ಆರಂಭ: ಬಿಸಿಸಿಐ

12:17 AM Jul 11, 2021 | Team Udayavani |

ಹೊಸದಿಲ್ಲಿ/ಕೊಲಂಬೊ: ಭಾರತ-ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿ ಜು. 18ರಂದು ಆರಂಭವಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ತಿಳಿಸಿದ್ದಾರೆ. ಶ್ರೀಲಂಕಾ ಕ್ರಿಕೆಟ್‌ ತಂಡದಲ್ಲಿ ಎರಡು ಕೋವಿಡ್‌ ಕೇಸ್‌ ಕಂಡುಬಂದ ಕಾರಣ ಈ ಬದಲಾವಣೆ ಮಾಡಲಾಗಿದೆ.

Advertisement

ಮೂಲ ವೇಳಾಪಟ್ಟಿಯಂತೆ ಜು. 13ರಂದು ಏಕದಿನ ಪಂದ್ಯದೊಂದಿಗೆ ಸರಣಿ ಆರಂಭವಾಗಬೇಕಿತ್ತು. ಆದರೆ ಇಂಗ್ಲೆಂಡ್‌ನಿಂದ ಮರಳಿದ ಬಳಿಕ ಲಂಕಾ ತಂಡದ ಬ್ಯಾಟಿಂಗ್‌ ಕೋಚ್‌ ಗ್ರ್ಯಾಂಟ್‌ ಫ್ಲವರ್‌ ಮತ್ತು ಡಾಟಾ ವಿಶ್ಲೇಷಕ ಜಿ.ಟಿ. ನಿರೋಷನ್‌ ಅವರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟ ಕಾರಣ ಸರಣಿಯನ್ನು ಸ್ವಲ್ಪ ದಿನಗಳ ಮಟ್ಟಿಗೆ ಮುಂದೂಡುವ ತೀರ್ಮಾನಕ್ಕೆ ಬರಲಾಯಿತು.
ಜು. 17ಕ್ಕೆ ಸರಣಿ ಆರಂಭವಾಗಲಿದೆ ಎಂದು ಶುಕ್ರವಾರ ರಾತ್ರಿ ವರದಿ ಯಾಗಿತ್ತು. ಆದರೆ ಇದು ಜು. 18ಕ್ಕೆ ಮೊದಲ್ಗೊಳ್ಳಲಿದೆ ಎಂದು ಜಯ್‌ ಶಾ ಸ್ಪಷ್ಟಪಡಿಸಿದರು.

ಪರಿಷ್ಕೃತ ವೇಳಾಪಟ್ಟಿಯಂತೆ ಏಕದಿನ ಪಂದ್ಯಗಳು ಜು. 18, 20 ಮತ್ತು 23ರಂದು ನಡೆಯಲಿವೆ. ಟಿ20 ಪಂದ್ಯಗಳನ್ನು ಜು. 25, 27 ಮತ್ತು 29ರಂದು ಆಡಲಾಗುವುದು. ಎಲ್ಲ ಪಂದ್ಯಗಳು ಕೊಲಂಬೊದ “ಆರ್‌. ಪ್ರೇಮದಾಸ ಸ್ಟೇಡಿಯಂ’ನಲ್ಲಿ ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next