Advertisement

ಲಿಂಗಾನುಪಾತ ಸೂಚ್ಯಂಕ ಪಟ್ಟಿ: 04 ಸ್ಥಾನ ಕುಸಿದು 112ನೇ ಸ್ಥಾನಕ್ಕಿಳಿದ ಭಾರತ

09:52 AM Dec 18, 2019 | Hari Prasad |

ನವದೆಹಲಿ: ವಿಶ್ವ ಆರ್ಥಿಕ ವೇದಿಕೆ ಹೊರತಂದಿರುವ ಲಿಂಗಾನುಪಾತ ಪಟ್ಟಿ ಇಂದು ಬಿಡುಗಡೆಗೊಂಡಿದೆ. ಮಹಿಳೆಯರ ಆರೊಗ್ಯ, ಜೀವನ ನಿರ್ವಹಣೆ ಮತ್ತು ಆರ್ಥಿಕ ಭಾಗೀದಾರಿಕೆಯಲ್ಲಿ ಭಾರೀ ಅಂತರ ಸೃಷ್ಟಿಯಾಗಿರುವಂತೆ ಭಾರತ ವಿಶ್ವ ಲಿಂಗಾನುಪಾತ ಸೂಚ್ಯಂಕದಲ್ಲಿ ಎರಡು ಸ್ಥಾನಗಳ ಕುಸಿತವನ್ನು ದಾಖಲಿಸಿದೆ. ಈ  ಪಟ್ಟಿಯಲ್ಲಿ ಕಳೆದ ವರ್ಷ 108ನೇ ಸ್ಥಾನದಲ್ಲಿದ್ದ ಭಾರತ ಇದೀಗ 112ನೇ ಸ್ಥಾನಕ್ಕೆ ಕುಸಿದಿದೆ.

Advertisement

ಈ ಪಟ್ಟಿಯಲ್ಲಿ ನಮ್ಮ ನೆರೆ ರಾಷ್ಟ್ರಗಳಾಗಿರುವ ಚೀನಾ (106), ಶ್ರೀಲಂಕಾ (102), ನೇಪಾಳ (101) ಮತ್ತು ಬಾಂಗ್ಲಾದೇಶ (50) ನಮಗಿಂತ ಮೇಲಿರುವುದು ಕಳವಳಕಾರಿ ಸಂಗತಿಯಾಗಿದೆ..

ಇನ್ನು ವಿಶ್ವದ ಅತ್ಯಂತ ತಟಸ್ಥ ಲಿಂಗಾನುಪಾತ ರಾಷ್ಟ್ರವಾಗಿ ಐರ್ಲೆಂಡ್ ಅಗ್ರಸ್ಥಾನದಲ್ಲಿದೆ. ಯೆಮೆನ್ 153ನೇ ಸ್ಥಾನವನ್ನು ಸಂಪಾದಿಸುವ ಮೂಲಕ ಲಿಂಗಾನುಪಾತ ವಿಚಾರದಲ್ಲಿ ಅತೀ ಕಳಪೆ ಸಾಧನೆ ಮಾಡಿರುವುದು ಕಳವಳಕಾರಿ ವಿಚಾರಚಾಗಿದೆ. ಮತ್ತು ಇನ್ನುಳಿದಂತೆ ಇರಾಕ್ (152) ಮತ್ತು ಪಾಕಿಸ್ಥಾನ (151) ಲಿಂಗಾನುಪಾತ ವಿಚಾರದಲ್ಲಿ ಕನಿಷ್ಟ ಸ್ಥಾನವನ್ನು ಸಂಪಾದಿಸಿವೆ.

2019ರಲ್ಲಿ ಲಿಂಗಾನುಪಾತವು 99.5 ಪ್ರತಿಶತಕ್ಕೆ ಬಂದು ನಿಂತಿದೆ. ಆದರೆ ಈ ಅನುಪಾತವು 2018ರಲ್ಲಿ ಸ್ವಲ್ಪ ಉತ್ತಮವಾಗಿದ್ದ ಕಾರಣ ಭಾರತ 108ನೇ ಸ್ಥಾನವನ್ನು ಸಂಪಾದಿಸಿತ್ತು ಎಂದು ಜಿನೇವಾ ಮೂಲದ ವಿಶ್ವ ಆರ್ಥಿಕ ವೇದಿಕೆಯ ಅಭಿಪ್ರಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next