ಮುಂಬೈ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಮುಗಿದು ಈಗಾಗಲೇ ವಾರ ಕಳೆದಿದೆ. ಭಾರತ- ನ್ಯೂಜಿಲ್ಯಾಂಡ್ ನಡುವೆ ಸೌಥಂಪ್ಟನ್ ನಲ್ಲಿ ನಡೆದ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಬಳಗ ಗೆದ್ದು ಬೀಗಿದೆ. ಈ ಟೆಸ್ಟ್ ಫೈನಲ್ ಪಂದ್ಯದ ಬಗ್ಗೆ ಚರ್ಚೆಗಳು ಮಾತ್ರ ಇನ್ನೂ ನಿಂತಿಲ್ಲ.
ಭಾರತದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಇದೀಗ ಈ ಪಂದ್ಯದ ಬಗ್ಗೆ ಮಾತನಾಡಿದ್ದಾರೆ. ಭಾರತ ತಂಡವು ಟೆಸ್ಟ್ ಫೈನಲ್ ಪಂದ್ಯದಲ್ಲಿ ಕಡಿಮೆ ಬ್ಯಾಟ್ಸ್ ಮನ್ ಜೊತೆ ಆಡಿತು. ಭಾರತಕ್ಕೆ ಮತ್ತೋರ್ವ ಬ್ಯಾಟ್ಸಮನ್ ನ ಅಗತ್ಯವಿತ್ತು ಎಂದು ನನ್ನ ಅನಿಸಿಕೆ. ನ್ಯೂಜಿಲ್ಯಾಂಡ್ ಬಳಿ ಇರುವಂತೆ ಭಾರತದ ಬಳಿ ವೇಗದ ಬೌಲಿಂಗ್ ಮಾಡಬಲ್ಲಂತಹ ಆಲ್ ರೌಂಡರ್ ಕೂಡಾ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ:ಚೆಸ್ ಇತಿಹಾಸದ ಅತೀ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆದ 12 ವರ್ಷದ ಅಭಿಮನ್ಯು ಮಿಶ್ರಾ
ಭಾರತ ಪಂದ್ಯ ಸೋಲಲು ಏನು ತಪ್ಪು ಮಾಡಿದೆ ಎಂದು ನಾವು ಕ್ರಿಕೆಟಿಂಗ್ ದೃಷ್ಟಿಕೋನದಿಂದ ನೋಡಿದರೆ, ನನ್ನ ಪ್ರಕಾರ ಮೊದಲ ಇನ್ನಿಂಗ್ ಉತ್ತಮವಾಗಿತ್ತು, ಆದರೆ ಎರಡನೇ ಇನ್ನಿಂಗ್‌ನಲ್ಲಿ ಭಾರತದ ಬ್ಯಾಟಿಂಗ್ ನಿರಾಶಾದಾಯಕವಾಗಿತ್ತು. ಎರಡನೇ ಇನ್ನಿಂಗ್‌ನಲ್ಲಿ ಚೆಂಡು ಅಷ್ಟೊಂದು ಸ್ವಿಂಗ್ ಆಗುತ್ತಿರಲಿಲ್ಲ. ಭಾರತೀಯ ಬ್ಯಾಟ್ಸಮನ್‌ಗಳು ಹೆಚ್ಚು ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡಬಹುದಿತ್ತು ಎಂದು ಪಠಾಣ್ ಹೇಳಿದ್ದಾರೆ.
ರಿಷಭ್ ಪಂತ್ ಅವರ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಮತ್ತು ಆತ ಚೆಂಡುಗಳನ್ನು ಹೇಗೆ ಚೆನ್ನಾಗಿ ಹೊಡೆಯಬಲ್ಲರು ಎನ್ನುವುದರ ಬಗ್ಗೆ ನನಗೆ ತಿಳಿದಿದೆ. ಆದರೆ ಇದರರ್ಥ ವೇಗದ ಬೌಲರ್ ಅನ್ನು ಜವಾಬ್ದಾರಿಯ ಬಿಟ್ಟು ಹೊಡೆಯಬೇಕು ಎಂದರ್ಥವಲ್ಲ “ಎಂದು ಮಾಜಿ ಎಡಗೈ ವೇಗಿ ಪಠಾಣ್ ಹೇಳಿದರು.