Advertisement

Samaresh Jung: ಶೂಟಿಂಗ್‌ ಕೋಚ್‌ ಜಂಗ್‌ ಮನೆ ತೆರವು ಆದೇಶಕ್ಕೆ ತಡೆ

09:48 PM Aug 03, 2024 | Team Udayavani |

ಹೊಸದಿಲ್ಲಿ: ಕಳೆದ 75 ವರ್ಷದಿಂದ ವಾಸವಿದ್ದ ಮನೆ ತೆರವು ಮಾಡಲು ಕೇವಲ 48 ಗಂಟೆಗಳ ಗಡುವು ಪಡೆದಿದ್ದ ಶೂಟಿಂಗ್‌ ಕೋಚ್‌ ಸಮರೇಶ್‌ ಜಂಗ್‌ ಅವರಿಗೆ ತಾತ್ಕಾಲಿಕ ನಿರಾಳತೆ ಲಭಿಸಿದೆ. ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅವರು ಈ ಸಂಬಂಧ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ಆ. 5ರಂದು ನಡೆಯಲಿದೆ.

Advertisement

ನ್ಯಾಯಾಲಯದ ಆದೇಶದ ಅನಂತರ ಮನೆ ತೆರವು ಮಾಡುವ ಸಂಬಂಧ ಅಂತಿಮ ನಿರ್ಧಾರ ಪ್ರಕಟಗೊಳ್ಳಲಿದೆ. ಜಂಗ್‌ ನ್ಯಾಯಾಲಯಕ್ಕೆ ಅರ್ಜಿ ಹಾಕಿರುವುದರಿಂದ ಖೈಬರ್‌ ಪಾಸ್‌ ಪ್ರದೇಶದ 200 ಇತರೆ ನಿವಾಸಿಗಳೂ ಮನೆ ತೆರವು ಸಂಕಟದಿಂದ ಪಾರಾಗಿದ್ದಾರೆ.

2006, 2010ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ 7 ಚಿನ್ನ, 5 ಬೆಳ್ಳಿ, 2 ಕಂಚಿನ ಪದಕ ಗೆದ್ದಿರುವ ಜಂಗ್‌, ಈ ಬಾರಿ ಭಾರತ ಪಿಸ್ತೂಲ್‌ ತಂಡಕ್ಕೆ ತರಬೇತುದಾರರಾಗಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ತೆರಳಿದ್ದರು. ಜಂಗ್‌ ಭಾರತಕ್ಕೆ ವಾಪಸಾದ ಒಂದೇ ಗಂಟೆಯಲ್ಲಿ, ಕೇಂದ್ರ ಸರಕಾರದ ಎಲ್‌ಆ್ಯಂಡ್‌ಡಿಒದಿಂದ (ಭೂಮಿ ಮತ್ತು ಅಭಿವೃದ್ಧಿ ಕಚೇರಿ) ಅವರಿಗೆ ಮನೆ ತೆರವು ಮಾಡುವ ನೋಟಿಸ್‌ ಬಂದಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಂಗ್‌, “ನಾನು ಕಾನೂನಿಗಿಂತ ದೊಡ್ಡವನಲ್ಲ. ನ್ಯಾಯಾಲಯ ಹೇಳಿದರೆ ಮನೆ ತೆರವು ಮಾಡಲು ಸಿದ್ಧ. ನಮ್ಮ ಕುಟುಂಬ 75 ವರ್ಷಗಳಿಂದ ಆ ಮನೆಯಲ್ಲಿ ವಾಸವಿದೆ. ಅದರ ಮಾಲಕರಿಗೆ 1978ರಿಂದ ಬಾಡಿಗೆಯನ್ನೂ ಪಾವತಿಸುತ್ತಿದ್ದೇವೆ. ಬರೀ 2 ದಿನಗಳಲ್ಲಿ ಖಾಲಿ ಮಾಡಲು ಹೇಗೆ ಸಾಧ್ಯ? ಕನಿಷ್ಠ 2 ತಿಂಗಳಾದರೂ ಸಮಯ ಬೇಕು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next