Advertisement

ಯುಕೆಗೆ ಭಾರತದಿಂದ 30 ಲಕ್ಷ ಪ್ಯಾರಾಸೆಟಮಾಲ್‌ ಪ್ಯಾಕೆಟ್‌

09:11 AM Apr 12, 2020 | Hari Prasad |

ನವದೆಹಲಿ: ಅಗತ್ಯವಿರುವ ದೇಶಗಳಿಗೆ ಪ್ಯಾರಾಸೆಟಮಾಲ್‌ ಮಾತ್ರೆಗಳನ್ನು ರಫ್ತು ಮಾಡಲು ಕೇಂದ್ರ ಸರಕಾರ ನಿರ್ಧರಿಸಿದ ಬೆನ್ನಲ್ಲೇ, ಭಾರತದಿಂದ ಯುನೈಟೆಡ್‌ ಕಿಂಗ್‌ಡಮ್ 30 ಲಕ್ಷ ಪ್ಯಾಕೆಟ್‌ ಪ್ಯಾರೆಸೆಟಮಾಲ್‌ ಮಾತ್ರೆಗಳನ್ನು ಖರೀದಿಸಿದೆ.

Advertisement

ಕೋವಿಡ್ ವೈರಸ್‌ ಆರಂಭಿಕ ಹಂತದಲ್ಲಿರುವವರಿಗೆ ಈ ಮಾತ್ರೆಗಳನ್ನು ಸೂಚಿಸಲಾಗುವ ಕಾರಣಕ್ಕೆ ಇದಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಭಾನುವಾರ ಪ್ಯಾರಾಸೆಟಮಾಲ್‌ ಪ್ಯಾಕ್‌ ಗಳನ್ನು ಹೊತ್ತ ವಿಮಾನವು ಯು.ಕೆ.ಯನ್ನು ತಲುಪಲಿವೆ.

ಇದೇ ವೇಳೆ, ಭಾನುವಾರದಿಂದ ಭಾರತದಲ್ಲಿರುವ ತನ್ನ ಪ್ರಜೆಗಳನ್ನು ಬೆಂಗಳೂರು, ಕೊಚ್ಚಿ ಮೂಲಕ ಕರೆಯಿಸಿಕೊಳ್ಳಲೂ ಇಂಗ್ಲಂಡ್ ಸಿದ್ಧತೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next