Advertisement

ಮೋದಿ ಆಡಳಿತದಲ್ಲಿ ಭಾರತ ಪ್ರಕಾಶಮಾನ: ಬಿವೈಆರ್‌

03:58 PM Sep 18, 2018 | |

ಶಿಕಾರಿಪುರ: ದೇಶ ಕಂಡ ಶ್ರೇಷ್ಟ ಪ್ರಧಾನಿ ಅಜಾತ ಶತ್ರು ಅಟಲ್‌ ಜೀ ನಂತರ ರಾಷ್ಟ್ರ ಮುನ್ನಡೆಸಿದ ಏಕೈಕ ಶಕ್ತಿ ಎಂದರೆ ಪ್ರಧಾನಿ ನರೇಂದ್ರ ಮೋದಿ. ಅವರ ಆಡಳಿತಾವಧಿಯಲ್ಲಿ ವಿಶ್ವವೇ ನಿಬ್ಬೆರಗಾಗುವಂತೆ ಭಾರತ ಪ್ರಕಾಶಿಸಿದೆ ಎಂದು ಮಾಜಿ ಶಾಸಕ ಬಿ.ವೈ. ರಾಘವೇಂದ್ರ ಹೇಳಿದರು. 

Advertisement

ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪ್ರಧಾನಿ ಮೋದಿ ಅವರ ಜನ್ಮದಿನದ ಪ್ರಯುಕ್ತ ಅಯೋಜಿಸಿದ್ದ ಸ್ವತ್ಛ
ಭಾರತ್‌ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೋದಿ ಅವರ ಸ್ವತ್ಛ ಭಾರತ್‌ ಕಲ್ಪನೆಗೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರ ಚಿಂತನೆ ಅದ್ಭುತವಾದದ್ದು ಮತ್ತು ಅಗಾಧವಾದದ್ದು. ಚಿಕ್ಕ ವಿಷಯಗಳಿಗೆ ನಾವು ಹೆಚ್ಚು ಪ್ರಾಮುಖ್ಯ ಕೊಟ್ಟಾಗ ಮಾತ್ರ ಎತ್ತರಕ್ಕೆ ಬೆಳೆಯಲು ಸಾಧ್ಯ. ಸ್ವತ್ಛತೆ ನಮ್ಮ ಬದುಕಿನ ಅವಿಭಾಜ್ಯ ಅಂಗ. ವಿದ್ಯಾರ್ಥಿ ದಿಸೆಯಲ್ಲಿ ನಾವು ಸ್ವತ್ಛ ಪರಿಸರದತ್ತ ಗಮನ ನೀಡಬೇಕು. ಕೇಂದ್ರ ಸರ್ಕಾರ ಜಿಡಿಪಿ ಗ್ರೋತ್‌ ನಲ್ಲಿ ವಿಶ್ವದಲ್ಲಿ ಏಳನೇ ಸ್ಥಾನದಲ್ಲಿದೆ. ಭಾರತದಲ್ಲಿ 9 ಕೋಟಿ ಶೌಚಾಯಲಗಳನ್ನು ಮೋದಿ ಅವರ ಸರ್ಕಾರ ನಿರ್ಮಾಣ ಮಾಡಿದೆ ಎಂದರು.
 
ಪ್ರಧಾನಿ ಹುದ್ದೆಯಲ್ಲಿ ಇದ್ದು ಪೊರಕೆ ಹಿಡಿದು ಸ್ವತ್ಛ ಭಾರತ ಕಲ್ಪನೆಗೆ ಜೀವ ತುಂಬಿದವರು ಮೋದಿ. ಅವರು ಒಬ್ಬ ಮಾದರಿ ಆದರ್ಶ ಪ್ರಧಾನಿ ಎಂದರೂ ತಪ್ಪಾಗಲಾರದು. ಪ್ರತಿ ಹಳ್ಳಿಹಳ್ಳಿಗಳಲ್ಲಿಯೂ ಸ್ವತ್ಛತಾ ಕಾರ್ಯಕ್ರಮಕ್ಕೆ ಪ್ರಾಧಾನ್ಯತೆ ನೀಡಿದರೆ ಅವರ ಜನ್ಮ ದಿನಾಚರಣೆ ಸಾರ್ಥಕವಾಗುತ್ತದೆ. ಸ್ವಾತಂತ್ರ್ಯಾ ನಂತರ ಜನಿಸಿದ ನರೇಂದ್ರ ಮೋದಿ ಅವರು ಭಾರತದ ದಿಕ್ಕನ್ನೇ ಬದಲಾಯಿಸಿ ಹೊಸತನದ ಮೋಡವನ್ನು ಉದಯಿಸಿದರು ಎಂದರು.

ನಂತರ ಮಾತನಾಡಿದ ಬಿಜೆಪಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಕೆ.ಎಸ್‌. ಗುರುಮೂರ್ತಿ, ವಿರೋದಿಗಳು ಎಷ್ಟೇ ಟೀಕೆ ಮಾಡಿದರೂ ಮೋದಿ ಅವರ ಸಂಕಲ್ಪ ಶಕ್ತಿ ಅದ್ಭುತವಾದದ್ದು. ಇಂದೊಂದು ಪ್ರೇರಣಾದಾಯಕ ಕಾರ್ಯ ಎಂದರು .
 
 ತಾಪಂ ಅಧ್ಯಕ್ಷ ಕವಲಿ ಸುಬ್ರಮಣ್ಯ, ಸಂಸ್ಥೆಯ ಅಧ್ಯಕ್ಷ ಎಂ.ಬಿ. ಶಿವಕುಮಾರ, ಆಡಳಿತ ಅಧಿಕಾರಿ ಎಸ್‌.ಎಸ್‌. ಗದಗ್‌, ಸಣ್ಣ ಹನುಮಂತಪ್ಪ, ಪ್ರಾಂಶುಪಾಲ ವೀರೇಂದ್ರ, ಕುಬೇರಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next