Advertisement

MUDA Case: ಸಿಎಂ ವಿರುದ್ಧ ತೀರ್ಪು…: ಕಾನೂನು ಎಲ್ಲರಿಗೂ ಒಂದೇ ಎಂದ ಬಿ.ವೈ.ರಾಘವೇಂದ್ರ

02:51 PM Sep 24, 2024 | sudhir |

ಶಿವಮೊಗ್ಗ: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಹೈಕೋರ್ಟ್ ಅಸ್ತು ಎಂದ ಪ್ರಕರಣಕ್ಕೆ ಸಂಬಂಧಿಸಿ ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಅವರು ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ವಿರುದ್ಧ ತೀರ್ಪು ಬಂದಿದೆ ಇದರಿಂದ ಗೊತ್ತಾಗುತ್ತದೆ ಕಾನೂನು ಎಲ್ಲರಿಗೂ ಒಂದೇ ಎಂಬುದು, ಮುಖ್ಯಮಂತ್ರಿಗಳ ವಿರುದ್ಧ ನ್ಯಾಯಾಲಯವೇ ಒಪ್ಪಿಗೆ ನೀಡಿದೆ, ನ್ಯಾಯ ಸಾಮಾನ್ಯ ವ್ಯಕ್ತಿಗೂ ಒಂದೇ, ರಾಜಕೀಯ ವ್ಯಕ್ತಿಗೂ ಒಂದೇ ಎಂಬುದು ಅರ್ಥ ಮಾಡಿಕೊಳ್ಳಬೇಕು.

ಇನ್ನಾದರೂ ಸಿದ್ಧರಾಮಯ್ಯನವರು ಅಧಿಕಾರದಿಂದ ದೂರ ಇರಬೇಕು, ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ವಿಚಾರಣೆಗೆ ಒಳಗಾಗಬೇಕು ಎಂದು ಹೇಳಿದರು.

ಬಹಳ ದಿನಗಳಿಂದ ತಪ್ಪು ಮಾಡಿಯೇ ಇಲ್ಲ ಎಂದು ಸಿದ್ಧರಾಮಯ್ಯ ಅವರು ಹೇಳುತ್ತಿದ್ದರು ಆದರೆ ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡ ಬೇಕು ಎಂದು ಹೇಳಿದ ಬಿ.ವೈ. ರಾಘವೇಂದ್ರ ಅವರು ಸಿದ್ದರಾಮಯ್ಯ ಅವರು ಆರೋಪ ಮುಕ್ತರಾಗಿ ಬರಲಿ ಎಂದು ದೇವರಲ್ಲಿ ನಾನು ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಹೇಳಿದರು.

Advertisement

ಬಿಎಸ್ ವೈ ಮನೆಗೆ ಪೊಲೀಸ್ ಬಿಗಿ ಬಂದೋಬಸ್ತ್:
ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಹೈಕೋರ್ಟ್ ಅಸ್ತು ಎಂದ ಬೆನ್ನಲ್ಲೇ ವಿನೋಬ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ಎಎಸ್ಐ ಸೇರಿ ಐದು ಜನ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next